For Quick Alerts
ALLOW NOTIFICATIONS  
For Daily Alerts

French Open 2023: 3ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ದಾಖಲೆ ಬರೆದ ಇಗಾ ಸ್ವಿಯಾಟೆಕ್

ಶನಿವಾರ, ಜೂನ್ 10ರಂದು ನಡೆದ 2023ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಶ್ರೇಯಾಂಕ ರಹಿತ ಕರೋಲಿನಾ ಮುಚೋವಾ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ 1 ಟೆನ್ನಿಸ್ ತಾರೆ ಇಗಾ ಸ್ವಿಯಾಟೆಕ್ ತನ್ನ ರೋಲ್ಯಾಂಡ್ ಗ್ಯಾರೋಸ್ ಕಿರೀಟವನ್ನು ಉಳಿಸಿಕೊಂಡರು.

ರೋಮಾಂಚಕ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ ಅವರು ಕರೋಲಿನಾ ಮುಚೋವಾ ವಿರುದ್ಧ 6-2, 5-7, 6-4 ಸೆಟ್‌ಗಳಿಂದ ಗೆಲ್ಲುವ ಮೂಲಕ ತನ್ನ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದರು.

French Open 2023: Iga Sviatek Wins Record 3rd French Open Title

2007ರಿಂದ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ಮಹಿಳಾ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇಗಾ ಸ್ವಿಯಾಟೆಕ್ ಪಾತ್ರರಾದರು.

ಪೋಲೆಂಡ್‌ನ 22 ವರ್ಷದ ಇಗಾ ಸ್ವಿಯಾಟೆಕ್ ಓಪನ್ ಟೂರ್ನಿಯಲ್ಲಿ ತನ್ನ ಮೊದಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳನ್ನು ಗೆದ್ದ ಮೂರನೇ ಮಹಿಳಾ ಆಟಗಾರ್ತಿಯಾಗಿದ್ದಾರೆ. ಪೋಲ್ ಅವರು ಪ್ಯಾರಿಸ್‌ನಲ್ಲಿ 2020 ಮತ್ತು 2022ರ ಪ್ರಶಸ್ತಿಗಳನ್ನು ಮತ್ತು ಕಳೆದ ವರ್ಷದ ಯುಎಸ್ ಓಪನ್ ಗೆದ್ದಿದ್ದರು.

ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ ಮಾತ್ರ ಈ ಸಾಧನೆ ಮಾಡಿದ ಇತರ ಆಟಗಾರ್ತಿಯರಾಗಿದ್ದಾರೆ. 1990ರ ದಶಕದ ಆರಂಭದಲ್ಲಿ ಮೋನಿಕಾ ಸೆಲೆಸ್ (1990, 1991, 2002) ನಂತರ, ಪೋಲೆಂಡ್‌ನ ವಿಶ್ವದ ನಂಬರ್ 1 ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಉಳಿಸಿಕೊಂಡ ಅತ್ಯಂತ ಕಿರಿಯ ಮಹಿಳೆ ಎನಿಸಿದರು.

ಬೆಲ್ಜಿಯಂನ ಜಸ್ಟಿನ್ ಹೆನಿನ್ (2005, 2006, 2007) ನಂತರ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಸತತವಾಗಿ ಗೆದ್ದ ಮೊದಲ ಮಹಿಳೆಯಾದರು.

French Open 2023: Iga Sviatek Wins Record 3rd French Open Title

ಸೆರೆನಾ ವಿಲಿಯಮ್ಸ್ (1999 ಯುಎಸ್ ಓಪನ್, 2002 ಫ್ರೆಂಚ್ ಓಪನ್, 2002 ವಿಂಬಲ್ಡನ್, 2002 ಯುಎಸ್ ಓಪನ್) ನಂತರ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಗಳನ್ನು ಇಗಾ ಸ್ವಿಯಾಟೆಕ್ ಗಳಿಸಿದರು.

ಇಗಾ ಸ್ವಿಯಾಟೆಕ್‌ನ ಮೊದಲ ನಾಲ್ಕು ಪ್ರಮುಖ ಪ್ರಶಸ್ತಿಗಳಲ್ಲಿ ಫ್ರೆಂಚ್ ಓಪನ್ (2020, 2022, 2023) ಮತ್ತು 2023ರ ಯುಎಸ್ ಓಪನ್ ಸೇರಿವೆ.

ಇಗಾ ಸ್ವಿಯಾಟೆಕ್ ಆರಂಭದಲ್ಲಿ ತನ್ನ ಕೌಶಲ್ಯದಿಂದ ಆಕ್ರಮಣಕಾರಿ ಆಟ ಪ್ರದರ್ಶಿಸಿದರು ಮತ್ತು ಆರಂಭಿಕ ಸೆಟ್ ಅನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದರು. ಎದುರಾಳಿ ಕರೋಲಿನಾ ಮುಚೋವಾ ಮತ್ತೆ ಪ್ರತಿ ಹೋರಾಟ ನೀಡಿದರೂ, ತನ್ನ ಆವೇಗವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಇಗಾ ಸ್ವಿಯಾಟೆಕ್ ಪಂದ್ಯದ ಮೇಲೆ ನಿಯಂತ್ರಣ ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಿತು.

ನಂತರ, ಕರೋಲಿನಾ ಮುಚೋವಾ ಅವರ ಪರಿಶ್ರಮ ಫಲ ನೀಡಿತು, ಎರಡನೇ ಸೆಟ್ ಅನ್ನು ಗೆಲ್ಲುವ ಮೂಲಕ ನಿರ್ಣಾಯಕ ಸೆಟ್‌ಗೆ ಕರೆದುಕೊಂಡು ಹೋಯಿತು.

ನಿರ್ಣಾಯಕ ಸೆಟ್‌ನಲ್ಲಿ ಕರೋಲಿನಾ ಮುಚೋವಾ 2-0 ಮುನ್ನಡೆ ಪಡೆದರು, ಆದರೆ ಇಗಾ ಸ್ವಿಯಾಟೆಕ್ ಸರಿಯಾದ ಸಮಯದಲ್ಲಿ ಪುಟಿದೆದ್ದು, 4-4ರಲ್ಲಿ ಸಮಬಲ ಸಾಧಿಸಿದರು. ನಂತರ ಇಗಾ ಸ್ವಿಯಾಟೆಕ್ ನಿರ್ಭೀತ ಹೊಡೆತಗಳೊಂದಿಗೆ ಆಟದಲ್ಲಿ ಪ್ರಾಬಲ್ಯ ಸಾಧಿಸಿದರು.

ಕರೋಲಿನಾ ಮುಚೋವಾ ತಮ್ಮದೇ ತಪ್ಪುಗಳಿಂದ ಹಿನ್ನಡೆ ಅನುಭವಿಸಿದರು. ಕೊನೆಯ ಎರಡು ಚಾಂಪಿಯನ್‌ಶಿಪ್ ಪಾಯಿಂಟ್‌ಗಳೊಂದಿಗೆ ಇಗಾ ಸ್ವಿಯಾಟೆಕ್ 6-4ರಿಂದ ಗೆಲ್ಲುವ ಮೂಲಕ ಮತ್ತೊಮ್ಮೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

Story first published: Sunday, June 11, 2023, 8:16 [IST]
Other articles published on Jun 11, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+