For Quick Alerts
ALLOW NOTIFICATIONS  
For Daily Alerts

French Open: ಸಬಲೆಂಕಾಗೆ ಆಘಾತ ನೀಡಿ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೆ ಕಾಲಿಟ್ಟ ಕರೊಲಿನಾ ಮುಕೋವಾ

ಜೆಕ್ ರಿಪಬ್ಲಿಕ್‌ನ ಟೆನಿಸ್ ಆಟಗಾರ್ತಿ ಕರೋಲಿನಾ ಮುಕೋವಾ ಪ್ರೆಂಚ್ ಓಪನ್‌ನ ಮಹಿಳಾ ವಿಭಾಗದಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ಜೂನ್ 8 ಗುರುವಾರದಂದು ನಡೆದ ಸೆಮಿಫೈನಲ್ ಸೆಣೆಸಾಟದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಅರೀನಾ ಸಬಲೆಂಕಾಗೆ ಆಘಾತಕಾರಿ ಸೋಲುಣಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ ಮುಕೋವಾ. ಈ ಸೆಮಿಫೈನಲ್ ಪಂದ್ಯದಲ್ಲಿ ಕರೋಲಿನಾ ಮುಕೋವಾ 7-6(5), 6(5)-7, 7-5 ಅಂತರದಿಂದ ಸಬಲೆಂಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ಸತಿ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಇಬ್ಬರು ಪ್ರತಿಭಾನ್ವಿತ ಆಟಗಾರ್ತಿಯರು ಕೂಡ ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಪಣಕ್ಕಿಟ್ಟು ಪೈಪೋಟಿಯ ಪ್ರದರ್ಶನಕ್ಕೆ ಇಳಿದರು. ಜೆಕ್‌ ಆಟಗಾರ್ತಿಯ ಅಸಾಂಪ್ರದಾಯಿಕ ತಂತ್ರ ಮತ್ತು ಉತ್ತಮವಾದ ಹೊಡೆತಗಳನ್ನು ಎದುರಿಸುವ ಸಾಮರ್ಥ್ಯವು ಆಕೆಯನ್ನು ಹೋರಾಟದಲ್ಲಿ ಉಳಿಯುವಂತೆ ಮಾಡಿತು. ಮತ್ತೊಂದೆಡೆ ಬೆಲಾರೂಸ್ ಆಟಗಾರ್ತಿ ಸಬಲೆಂಕಾ ಅವರ ಪ್ರಬಲ ಬೇಸ್‌ಲೈನ್ ಆಟ ಮತ್ತು ದೃಢನಿರ್ಧಾರಗಳು ಎದುರಾಳಿಯ ಹೋರಾಟಕ್ಕೆ ದಿಟ್ಟ ಪ್ರತ್ಯುತ್ತರ ನೀಡಲು ಕಾರಣವಾಯಿತು. ಹೀಗಾಗಿ ಕೊನೆಯವರೆಗೂ ಪಂದ್ಯ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಮುಕೋವಾ ಗೆಲುವಿನ ನಗೆ ಬೀರಿದ್ದಾರೆ.

French Open 2023: Karolina Muchova win against Aryna Sabalenka enter maiden French Open final

ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಕರೊಲಿನಾ ಮುಕೋವಾ ಮೊದಲ ಸ್ಪರ್ಧಿಯಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಮತ್ತು ಬೀಟ್ರಿಜ್ ಹಡ್ಡಾಡ್ ಮಾಯಾ ಸೆಣೆಸಾಡಲಿದ್ದು ಇದರಲ್ಲಿ ಗೆದ್ದ ಆಟಗಾರ್ತಿಯ ವಿರುದ್ಧ ಚೊಚ್ಚಲ ಫ್ರೆಂಚ್ ಓಪನ್ ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದ್ದಾರೆ ಮುಕೊವಾ.

ಈ ಪಂದ್ಯದ ಮೊದಲ ಸೆಟ್‌ನಲ್ಲಿ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಆದರೆ ಮುಕೋವಾ ಮೊದಲ ಸೆಟ್‌ನಲ್ಲಿ 7(7)-6(5) ಅಂತರದಿಂದ ಗೆಲುವು ಸಾಧಿಸಿ ತಮ್ಮ ವಶಕ್ಕೆ ಪಡೆದುಕೊಂಡರು. ನಂತರ ವಿಶ್ವದ ನಂ. ಆಟಗಾರ್ತಿಯಾಗಿರುವ ಸಬಲೆಂಕಾ 2ನೇ ಸುತ್ತಿನಲ್ಲಿ ಭಿನ್ನ ಯೋಜನೆಯೊಂದಿಗೆ ಹೋರಾಟ ನೆಡಸಿ ಕಮ್‌ಬ್ಯಾಕ್ ಮಾಡಿದರು. ನಂತರ ಮುಕೋವಾ 5-4 ಅಂತರದಿಂದ ಮುನ್ನಡೆ ಸಾಧಿಸಿದರು. ಮತ್ತೆ ಸಬಲೆಂಕಾ 5-5 ಅಂತರದಿಂದ ಸಮಬಲ ಸಾಧಿಸಿದರು. ಬಳಿಕ 6-6 ಸೆಟ್‌ನೊಂದಿಗೆ ಟೈ-ಬ್ರೇಕರ್ ಮುನ್ನಡೆಯಿತು. ನಂತರ ಸಬಲೆಂಕಾ ಎರಡನೇ ಸೆಟ್‌ಅನ್ನು 6(5)-7(7) ಅಂತರದಿಂದ ವಶಕ್ಕೆ ಪಡೆದುಕೊಂಡರು. ನಂತರ ನಿರ್ಣಾಯಕ ಸೆಟ್‌ನಲ್ಲಿ ಮಿಕೋವಾ 705 ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

Story first published: Thursday, June 8, 2023, 23:56 [IST]
Other articles published on Jun 8, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+