Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ 2023: ಅಲ್ಕರೇಜ್ ಮಣಿಸಿ ಫೈನಲ್‌ಗೆ ಪ್ರವೇಶಿಸಿದ ನೊವಾಕ್ ಜೊಕೊವಿಕ್

ಫ್ರೆಂಚ್ ಓಪನ್‌ನ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅಗ್ರ ಶ್ರೇಯಾಂಕದ ಮತ್ತು ನಂ. 1 ಆಟಗಾರ ಕಾರ್ಲೋಸ್ ಅಲ್ಕರೇಜ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೊಕೊವಿಕ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಮತ್ತೊಂದು ಗ್ರ್ಯಾನ್‌ಸ್ಲ್ಯಾಮ್‌ನ ಸನಿಹಕ್ಕೆ ಜೊಕೊವಿಕ್ ತಲುಪಿದ್ದು ದಾಖಲೆಯ 23ನೇ ಗ್ರ್ಯಾನ್‌ಸ್ಲ್ಯಾಮ್ ಗೆಲುವಿಗೆ ಕೇವಲ ಒಂದು ಗೆಲುವು ಮಾತ್ರವೇ ಅಗತ್ಯವಿದೆ.

ತೀವ್ರ ಪೈಪೊಟಿಯಿಂದ ಕೂಡಿದ್ದ ಈ ಸೆಮಿಫೈನಲ್ ಪಂದ್ಯದಲ್ಲಿ ಇಬ್ಬರು ಅಗ್ರ ಟೆನಿಸ್ ಆಟಗಾರರು ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಜೊಕೊವಿಕ್ ಅವರ ಅನುಭವವು ಮೇಲುಗೈ ಸಾಧಿಸಿದೆ. 6-3, 5-7, 6-1, 6-1 ಅಂತರದಿಂದ ಜೊಕೊವಿಕ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

French Open 2023: Novak Djokovic qualify for final after win against Alcaraz in semi final

ಈ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಜೊಕೊವಿಕ್ ವಿರುದ್ಧ ಅಲ್ಕರೇಜ್ ಮೇಲುಗೈ ಸಾಧಿಸಿದ್ದು ಮೊದಲ ಸೆಟ್ಟನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆದರೆ ಎರಡನೇ ಸೆಟ್‌ನ ಬಳಿಕ ಅಲ್ಕರೇಜ್ ಕೈ ಹಾಗೂ ಕಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಹೀಗಾಗಿ ಜೊಕೊವಿಕ್ ದಾಳಿಯನ್ನು ಸ,ರ್ಥವಾಗಿ ಎದುರಿಸಲು ಅಲ್ಕರೇಜ್ ವಿಫಲವಾದರು. ಹೀಗಾಗಿ ಕೊನೆಯ ಎರಡುಯ ಸೆಟ್‌ಗಳು ಕೂಡ ಸಂಪೂರ್ಣವಾಗಿ ಏಕಮುಖವಾಗಿ ಬದಲಾಯಿತು. ಹೀಗಾಗಿ ಜೊಕೊವಿಕ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

French Open 2023: Novak Djokovic qualify for final after win against Alcaraz in semi final

ಇನ್ನು ಈ ಪಂದ್ಯದ ಮುಕ್ಯಾತದ ಬಳಿಕ ಮಾತನಾಡಿದ ಜೊಕೊವಿಕ್ ಎದುರಾಳಿ ಆಟಗಾರ ಅನುಭವಿಸಿದ ಗಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಆತನ ಬೇಸರವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಗಾಯಗೊಂಡ ಬಗ್ಗೆ ವಿಷಾದವಿದೆ. ಆತ ಬೇಗನೆ ಚೇತರಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಅವನಿಗೆ ನೆಟ್‌ನಲ್ಲಿಯೂ ಹೇಳಿದ್ದೇನೆ ಆತ ಬಹಳ ಸಣ್ಣ ವಯಸ್ಸಿನವ. ಸಾಕಷ್ಟು ಸಮಯ ಆತನಿಗಾಗಿ ಇದೆ. ಈ ಟೂರ್ನಿಯನ್ನು ಭವಿಷ್ಯದಲ್ಲಿ ಆತ ಸಾಕಷ್ಟು ಬಾರಿ ಗೆಲ್ಲಲಿದ್ದಾನೆ. ಇದು ಖಂಡಿತಾ" ಎಂದಿದ್ದಾರೆ ನೊವಾಕ್ ಜೊಕೊವಿಕ್.

Story first published: Friday, June 9, 2023, 23:56 [IST]
Other articles published on Jun 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+