ಫ್ರೆಂಚ್ ಓಪನ್: ಮತ್ತೆ ನಂ.1 ಪಟ್ಟಕ್ಕೇರಿದ ಜೊಕೊವಿಕ್: ಅಗ್ರ 100ರಿಂದಲೂ ಹೊರಬಿದ್ದ ನಡಾಲ್
ಫ್ರೆಂಚ್ ಓಪನ್ ಗೆದ್ದು ವಿಶ್ವದಾಖಲೆ ಬರೆದ ನೊವಾಕ್ ಜೊಕೊವಿಕ್ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಭಾನುವಾರ ನಡೆದ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಜೊಕೊವಿಕ್ ಮೂರನೇ ಬಾರಿಗೆ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಲ್ಲದೆ ಟೆನಿಸ್ ಇತಿಹಾಸದಲ್ಲಿ 23 ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಾಫೆಲ್ ನಡಾಲ್ ಅವರ 22 ಗ್ರ್ಯಾನ್‌ಸ್ಲ್ಯಾಮ್ ದಾಖಲೆ ಹಿಂದಿಕ್ಕಿರುವ ಜೊಕೊವಿಕ್ ಸೆರೆನಾ ವಿಲಿಯಮ್ಸನ್ ದಾಖಲೆ ಸರಿಗಟ್ಟಿದ್ದಾರೆ.
36ರ ಹರೆಯದ ಜೊಕೊವಿಕ್ ಸ್ಪ್ಯಾನಿಷ್ ಯುವ ಆಟಗಾರ ಕಾರ್ಲೋಸ್ ಅಲ್ಕರೇಜ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಕರೇಜ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ರಷ್ಯಾದ ಸ್ಟಾರ್ ಡೇನಿಯಲ್ ಮೆಡ್ವೆಡೆವ್ ಕೂಡ ಒಂದು ಸ್ಥಾನದ ಕುಸಿತ ಕಂಡಿದ್ದು 3ನೇ ಸ್ಥಾನ ಪಡೆದುಕೊಂಡರೆ ಕ್ಯಾಸ್ಪರ್ ರೂಡ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ 14 ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್, ಈ ವರ್ಷದ ಜನವರಿಯಿಂದ ಯಾವುದೇ ಪಂದ್ಯವನ್ನು ಆಡದ ಕಾರಣ ಎಟಿಪಿ ಶ್ರೇಯಾಂಕದಲ್ಲಿ 136 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಫ್ರೆಂಚ್ ಓಪನ್ ಆರಂಭಕ್ಕೂ ಮುನ್ನ ಅಲ್ಕಾರೇಜ್ ಅಗ್ರ ಸ್ಥಾನವನ್ನು ಗಳಿಸಿಕೊಂಡಿದ್ದರು. ಅದಾದ ಬಳಿಕ ಈ ಬಾರಿಯ ಟೂರ್ನಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಗಾಯಕ್ಕೆ ತುತ್ತಾದ ಅವರನ್ನು ಜೊಕೊವಿಕ್ 3-6, 7-5, 1-6, 1-6 ಅಂತರದಿಂದ ಮಣಿಸಿದರು. ಇನ್ನು ಎರಡನೇ ಶ್ರೇಯಾಂಕದ ಮೆಡ್ವೆಡೆವ್ ಮೊದಲ ಸುತ್ತಿನಲ್ಲಿಯೇ ಬ್ರೆಜಿಲ್‌ನ ಶ್ರೇಯಾಂಕರಹಿತ ಥಿಯಾಗೊ ವೈಲ್ಡ್ ವಿರುದ್ಧ ಆಘಾತಕಾರಿ ಸೋಲು ಕಂಡರು. ಮತ್ತೊಂದೆಡೆ ರೂಡ್ ಪ್ಯಾರಿಸ್‌ನಲ್ಲಿ ಸತತ ಎರಡನೇ ವರ್ಷ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಫೈನಲ್‌ನಲ್ಲಿ ಯುವ ಉತ್ಸಾಹಿ ಆಟಗಾರ ಕ್ಯಾಸ್ಪರ್ ರುಡ್ ವಿರುದ್ಧ ಮೂರು ಗಂಟೆ 13 ನಿಮಿಷಗಳ ಕಾಲ ಸೆಣೆಸಾಟ ನಡೆಸಿ ಗೆಲುವು ಸಾಧಿಸಿದ್ದಾರೆ ಜೊಕೊವಿಕ್. 7-6 (1), 6-3, 7-5ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ ಜೊಕೊವಿಕ್ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ ಜೊಕೊವಿಕ್. ಈ ಬಾರಿಯ ಫ್ರೆಂಚ್ ಓಪನ್‌ನಿಂದ ಗಾಯದ ಗಾರಣದಿಂದಾಗಿ ರಾಫೆಲ್ ನಡಾಲ್ ಹಿಂದೆ ಸರಿದಿದ್ದರು. ಈ ಗೆಲುವಿನಿಂದಾಗಿ ಪ್ರೆಂಚ್ ಓಪನ್‌ನಲ್ಲಿ ಮೂರನೇ ಬಾರಿಗೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದ್ದಾರೆ ಜೊಕೊವಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications