For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: 23ನೇ ಗ್ರ್ಯಾನ್‌ಸ್ಲ್ಯಾಮ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೊವಾಕ್ ಜೊಕೊವಿಕ್

ಕ್ರೀಡಾ ಜಗತ್ತಿನ ಇತಿಹಾಸದಲ್ಲಿ ಟೆನಿಸ್ ಸ್ಟಾರ್ ನಿವಾಕ್ ಜೊಕೊವಿಕ್ ಐತಿಹಾಸಿಕ ಸಾಧನೆಯೊಂದು ಮಾಡಿದ್ದಾರೆ. ಪ್ರತಿಷ್ಠಿತ ಪ್ರೆಂಚ್ ಓಪನ್ ಟೂರ್ನಿಯನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿರುವ ಸರ್ಬಿಯಾದ ದಿಗ್ಗಜ ಆಟಗಾರ 23 ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಪ್ರಪ್ರಥಮ ಪುರುಷ ಟೆನಿಸ್ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರೂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದ ಜೊಕೊವಿಕ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮೂರನೇ ಶ್ರೇಯಾಂಕದ ನಿವಾಕ್ ಜೊಕೊವಿಕ್ ಎದುರಾಳಿ ಕ್ಯಾಸ್ಪರ್ ರೂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನೇರ ಸೆಟ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಟೆನಿಸ್ ಲೋಕದ ಅತಿ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ ನೊವಾಕ್ ಜೊಕೊವಿಕ್.

French Open 2023: Novak Djokovic win 23rd Grand Slam with 3rd French open title

ಫೈನಲ್‌ನಲ್ಲಿ ಯುವ ಉತ್ಸಾಹಿ ಆಟಗಾರ ಕ್ಯಾಸ್ಪರ್ ರುಡ್ ವಿರುದ್ಧ ಮೂರು ಗಂಟೆ 13 ನಿಮಿಷಗಳ ಕಾಲ ಸೆಣೆಸಾಟ ನಡೆಸಿ ಗೆಲುವು ಸಾಧಿಸಿದ್ದಾರೆ ಜೊಕೊವಿಕ್. 7-6 (1), 6-3, 7-5ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ ಜೊಕೊವಿಕ್ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಕಳೆದ ವರ್ಷ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ ಜೊಕೊವಿಕ್. ಈ ಬಾರಿಯ ಫ್ರೆಂಚ್ ಓಪನ್‌ನಿಂದ ಗಾಯದ ಗಾರಣದಿಂದಾಗಿ ರಾಫೆಲ್ ನಡಾಲ್ ಹಿಂದೆ ಸರಿದಿದ್ದರು. ಈ ಗೆಲುವಿನಿಂದಾಗಿ ಪ್ರೆಂಚ್ ಓಪನ್‌ನಲ್ಲಿ ಮೂರನೇ ಬಾರಿಗೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದ್ದಾರೆ ಜೊಕೊವಿಕ್.

ಇನ್ನು 23 ಗ್ರ್ಯಾನ್‌ಸ್ಲ್ಯಾಮ್‌ಗಳ ದಾಖಲೆಯ ಜೊತೆಗೆ ಜೊಕೊವಿಕ್ ಮತ್ತೊಂದು ಮಹತ್ವದ ಸಾಧನೆಯನ್ನೂ ಮಾಡಿದ್ದಾರೆ. ಎಲ್ಲಾ ನಾಲ್ಕು ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಕನಿಷ್ಠ ಮೂರು ಬಾರಿ ಗೆದ್ದ ಮೊದಲ ಪುರುಷ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ ನೊವಾಕ್ ಜೊಕೊವಿಕ್. ಈ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ಅತ್ಯಂತ ಯಶಸ್ವಿ ಟೆನಿಸಿಗೆ ಎನಿಸಿಕೊಂಡಿದ್ದಾರೆ ಸರ್ಬಿಯಾದ ಆಟಗಾರ.

Story first published: Sunday, June 11, 2023, 23:28 [IST]
Other articles published on Jun 11, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+