Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: ಸ್ವಿಟೊಲಿನಾ ಮಣಿಸಿ ಫ್ರೆಂಚ್ ಓಪನ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಸಬಲೆಂಕಾ

ಫ್ರೆಂಚ್ ಓಪನ್ ಕೊನೆಯ ಘಟ್ಟವನ್ನು ತಲುಪುತ್ತಿದೆ. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ಬೆಲಾರಸ್‌ನ ಅರೀನಾ ಸಬಲೆಂಕಾ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. 6-4, 6-4 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಸಬಲೆಂಕಾ ಅವರ ಗೆಲುವಿನ ಸರಪಳಿಯನ್ನು ತುಂಡರಿಸಿದ ಸ್ವಿಟೋಲಿನಾ ಚೊಚ್ಚಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಫ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ ವಿಶ್ವ ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಬಲೆಂಕಾ ಫ್ರಂಚ್ ಓಪನ್‌ನಲ್ಲಿ ಈವರೆಗೆ ಮೂರನೇ ಸುತ್ತಿನಿಂದ ಆಚೆ ಮುನ್ನಡೆದಿರಲಿಲ್ಲ. ಆದರೆ ಸ್ವಿಟೋಲಿನಾ ಅದ್ಭುತ ಪ್ರದರ್ಶನ ನೀಡಿ ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ಫ್ರೆಂಚ್ ಓಪನ್ ಗೆಲ್ಲುವ ಕನಸಿಗೆ ಹತ್ತಿರವಾಗಿದ್ದಾರೆ.

French Open: Aryna Sabalenka win against Elina Svitolina reach 1st semi-final at Roland Garros

ಸಬಲೆಂಕಾ ಅವರ ಆಕ್ರಮಣಕಾರಿ ನಡೆಗಳಿಂದಾಗಿ 37 ಅನಗತ್ಯ ತಪ್ಪುಗಳ ಹೊರತಾಗಿಯೂ ಅವರು ಮೇಲುಗೈ ಸಾಧಿಸಿದರು. ಅವರ ಆಕ್ರಮಣಕಾರಿ ರಿಟರ್ನ್‌ಗಳು ಮತ್ತು ಗ್ರೌಂಡ್‌ಸ್ಟ್ರೋಕ್‌ಗಳು ಸ್ವಿಟೋಲಿನಾರನ್ನು ಆರಂಭದಿಂದಲೂ ಎದುರಾಳಿಯನ್ನು ಹಿಮ್ಮೆಟ್ಟಿಸುತ್ತಲೇ ಸಾಗಿದರು. ಎರಡನೇ ಸೆಟ್‌ನ ಆರಂಭದಲ್ಲಿ ಒತ್ತಡದಲ್ಲಿದ್ದಾಗ 2-0 ಅಂತರದಲ್ಲಿದಲ್ಲಿದ್ದರೂ ಸಬಲೆಂಕಾ ಸತತ ನಾಲ್ಕು ಗೇಮ್‌ಗಳನ್ನು ಗೆಲ್ಲಲು ತನ್ನ ಆಕ್ರಮಣಕಾರಿ ಆಟವನ್ನು ತೀವ್ರಗೊಳಿಸಿದರು. ಈ ಮೂಲಕ ಪಂದ್ಯವನ್ನು ತಮ್ಮ ಪರವಾಗಿಸಿಕೊಂಡಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಸಬಲೆಂಕಾ ಇನ್ನೂ ಒಂದು ಸೆಟ್ ಅನ್ನು ಕೂಡ ಎದುರಾಳಿಗೆ ಬಿಟ್ಟುಕೊಟ್ಟಿಲ್ಲ.

ಸಬಲೆಂಕಾ ಈಗ ತನ್ನ ಚೊಚ್ಚಲ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಆಡುವ ಕನಸು ನನಸಾಗಿಸಿಕೊಳ್ಳಬೇಕಿದ್ದರೆ ಶ್ರೇಯಾಂಕ ರಹಿತ ಕರೋಲಿನಾ ಮುಚೋವಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣೆಸಾಟ ನಡೆಸಿ ಗೆಲುವು ಸಾಧಿಸಬೇಕಿದೆ. ಮಂಗಳವಾರ ನಡೆದ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಮುಚೋವಾ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ ಅವರನ್ನು ಸೋಲಿಸಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ತನ್ನ ಮೊದಲ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

Story first published: Tuesday, June 6, 2023, 19:58 [IST]
Other articles published on Jun 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+