French Open: ಮಾಧ್ಯಮ ಬಹಿಷ್ಕಾರ ಹಾಕಿದ ನವೋಮಿ ಒಸಾಕಾಗೆ ದಂಡ

ಪ್ಯಾರಿಸ್: ಜಪಾನ್‌ನ ಬಲಿಷ್ಠ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾಗೆ ಟೆನಿಸ್ ಗ್ರ್ಯಾನ್‌ಸ್ಲ್ಯಾಮ್ ಆಯೋಜಕರು 15,000 ಡಾಲರ್ (10,87,102 ರೂ.) ದಂಡ ವಿಧಿಸಿದ್ದಾರೆ. ಅಲ್ಲದೆ ಫ್ರೆಂಚ್ ಓಪನ್‌ನಿಂದ ಹೊರ ಕಳುಹಿಸುವುದಾಗಿ ಜೊತೆಗೆ ಭವಿಷ್ಯದ ಪ್ರಮುಖ ಟೂರ್ನಿಗಳಿಂದ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ ಎಂದು ಕರೆಯಲಾಗುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ನವೋಮಿ ಒಸಾಕಾ ಜಯ ಸಾಧಿಸಿದ್ದರು. ಪಂದ್ಯದ ಬಳಿಕ ಕರೆಯಲಾದ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದ್ದರು. ಒಸಾಕಾ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳದಿರುವುದು ಆಯೋಜಕರಿಗೆ ಸರಿಕಾಣಿಸಿಲ್ಲ. ಹೀಗಾಗಿಯೇ ಒಸಾಕಾಗೆ ದಂಡ ವಿಧಿಸಲಾಗಿದೆ.
4 ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ 23ರ ಹರೆಯದ ಒಸಾಕಾ, ಪ್ರಮುಖ ಟೂರ್ನಿಗಳ ವೇಳೆ ಸುದ್ದಿಗೋಷ್ಠಿ ಕರೆಯೋದು ಆಟಗಾರರ ಮನಸ್ಥಿತಿಯ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಅದು ಪರಿಣಾಮ ಬೀರುತ್ತದೆ. ಸುದ್ದಿಗೋಷ್ಠಿ ವೇಳೆ ಪತ್ರಕರ್ತರ ಪ್ರಶ್ನೆಗಳು ಕೆಳ ಕುಸಿದ ಆಟಗಾರನೊಬ್ಬನ್ನು ಒದೆಯುವ ರೀತಿಯಲ್ಲಿರುತ್ತದೆ. ಇದಕ್ಕಾಗೇ ತಾನು ಸುದ್ದಿಗೋಷ್ಠಿ ಬಹಿಷ್ಕರಿಸಿದ್ದಾಗಿ ತಿಳಿಸಿದ್ದಾರೆ.
ಫ್ರೆಂಚ್ ಓಪನ್ ಆರಂಭಿಕ ಸುದ್ದಿನಲ್ಲಿ ಒಸಾಕಾ ರೋಮ್ ಆಟಗಾರ್ತಿ ಪೆಟ್ರೀಷಿಯಾ ಮಾರಿಯಾ ಟಿಗ್ ಎದುರು 6-4, 7-6(4) ಜಯ ದಾಖಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications