ರಾಫೆಲ್ ನಡಾಲ್ ಸೋಲಿಸಿ ವಿಶಿಷ್ಠ ದಾಖಲೆ ಬರೆದ ನೊವಾಕ್ ಜೊಕೋವಿಕ್

ಪ್ಯಾರಿಸ್: ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ರೋಲ್ಯಾಂಡ್ ಗ್ಯಾರೋಸ್ ಎಂದು ಕರೆಯಲ್ಪಡುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಇತಿಹಾಸದಲ್ಲೇ ರಾಫೆಲ್ ನಡಾಲ್ ಅವರನ್ನು ಎರಡು ಬಾರಿ ಸೋಲಿಸಿದ ಮೊದಲ ಆಟಗಾರನಾಗಿ ಜೊಕೋವಿಕ್ ಗುರುತಿಸಿಕೊಂಡಿದ್ದಾರೆ.
ಶುಕ್ರವಾರ (ಜೂನ್ 11) ನಡೆದ ಫ್ರೆಂಚ್ ಓಪನ್ ಪುರುಷರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೋವಿಕ್ ಅವರು ಸ್ಪೇನ್ ಬಲಿಷ್ಠ, ಕ್ಲೇ ಕಿಂಗ್ ಖ್ಯಾತಿಯ ರಾಫೆಲ್ ನಡಾಲ್ ಅವರನ್ನು 3-6, 6-3, 7-6, 6-2ರ ಅಂತರದಲ್ಲಿ ಸೋಲಿಸಿದರು.
ಫೆಂಚ್ ಓಪನ್‌ನಲ್ಲಿ 13 ಬಾರಿ ಚಾಂಪಿಯನ್ ಎನಿಸಿರುವ ನಡಾಲ್ ಅವರಿಗೆ ಜೊಕೋವಿಕ್ ಟೂರ್ನಿಯ 3ನೇ ಸೋಲು ನೀಡಿದ್ದಾರೆ. ಕಳೆದ 16 ವರ್ಷಗಳಲ್ಲಿ ನಡಾಲ್ 108 ಪಂದ್ಯಗಳಲ್ಲಿ ಕೇವಲ 3 ಬಾರಿ ಸೋತಂತಾಗಿದೆ. ನಡಾಲ್ ಎದುರಿನ ಗೆಲುವಿನೊಂದಿಗೆ ಜೊಕೋವಿಕ್ 6ನೇ ಫ್ರೆಂಚ್ ಓಪನ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
2016ರಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಎನಿಸಿರುವ ಜೊಕೋವಿಕ್ 2015ರಲ್ಲೂ ನಡಾಲ್ ಅವರನ್ನು ಸೋಲಿಸಿದ್ದರು. ಹೀಗಾಗಿ ಜೊಕೋವಿಕ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ. ಭಾನುವಾರ (ಜೂನ್ 13) ನಡೆಯುವ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ಮತ್ತು ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಮುಖಾಮುಖಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications