ಫ್ರೆಂಚ್ ಓಪನ್: ಕ್ವಿಟೋವಾ ಸೋಲಿಸಿ ಫೈನಲ್ ಪ್ರವೇಶಿಸಿದ ಕೆನಿನ್

ಪ್ಯಾರಿಸ್: ಅಮೆರಿಕಾದ ನಾಲ್ಕನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್ ಎರಡನೇ ಗ್ರ್ಯಾಂಡ್‌ಸ್ಲ್ಯಾಮ್ ಫೈನಲ್‌ನತ್ತ ಲಗ್ಗೆಯಿಟ್ಟಿದ್ದಾರೆ. ಗುರುವಾರ (ಅಕ್ಟೋಬರ್ 8) ನಡೆದ ಪ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಕೆನಿನ್ ಅವರು ಝೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೋಫಿಯಾ ಕೆನಿನ್, ಎದುರಾಳಿ ಪೆಟ್ರಾ ಕ್ವಿಟೋವಾ ಅವರನ್ನು 6-4, 7-5ರ ಅಂತರದಿಂದ ಹಿಮ್ಮೆಟ್ಟಿಸಿದರು. ಫೈನಲ್ ಪಂದ್ಯದಲ್ಲಿ ಸೋಫಿಯಾ, ಪೋಲ್ಯಾಂಡ್ ಆಟಗಾರ್ತಿ ಇಗಾ ಜ್ವಾಟೆಕ್ ಅವರ ಸವಾಲು ಸ್ವೀಕರಿಸಲಿದ್ದಾರೆ.
ಟೂರ್ನಿಯಲ್ಲಿ ಏಳನೇ ಶ್ರೇಯಾಂಕಿತರಾಗಿದ್ದ ಕ್ವಿಟೋವಾ, 2012ರ ಬಳಿಕ ಇದೇ ಮೊದಲ ಬಾರಿಗೆ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್‌ಗಿರುವ ಇನ್ನೊಂದು ಹೆಸರು)ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ 21ರ ಹರೆಯದ ಕೆನಿನ್ ಎದುರು ಕ್ವಿಟೋವಾ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಪೆಟ್ರಾ ಕ್ವಿಟೋವಾ, ಸೆಮಿಫೈನಲ್‌ನಲ್ಲಿ ಎರಡೂ ಸೆಟ್‌ನಲ್ಲೂ ಎದುರಾಳಿಗೆ ಪೈಪೋಟಿ ನೀಡಲು ಯತ್ನಿಸಿದರು. ಆದರೆ ಕೆನಿನ್ ಎದುರಿನ ತಪ್ಪುಗಳಿಂದಾಗಿ ಕ್ವಿಟೋವಾ ಫೈನಲ್ ಅವಕಾಶ ಕೈ ತಪ್ಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications