ಫ್ರೆಂಚ್ ಓಪನ್ ಟೆನಿಸ್ ಟಿಕೆಟ್ ಕೊಂಡವರಿಗೆ ಹಣ ಮರುಪಾವತಿ

ಪ್ಯಾರಿಸ್, ಮೇ 7: ಕೊರೊನಾವೈರಸ್ ಕಾರಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ನಡೆಯೋದು ಅನಿಶ್ಚಿತವಾಗಿರುವುದರಿಂದ ಟೂರ್ನಿ ವೀಕ್ಷಿಸಲು ಟಿಕೆಟ್ ಖರೀದಿಸಿದವರ ಹಣ ಮರುಪಾವತಿಸಲಾಗುವುದು ಎಂದು ಫ್ರೆಂಚ್ ಟೆನಿಸ್ ಫೆಡರೇಶನ್ (ಎಫ್‌ಎಫ್‌ಟಿ) ಈ ಹೇಳಿದೆ. ಫ್ರಾನ್ಸ್‌ನಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 25,000 ದಾಟಿದೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಆವೆಮಣ್ಣಿನ ಕೋರ್ಟ್‌ನಲ್ಲಿ ನಡೆಯುವ ಪ್ರತಿಷ್ಠಿತ ಟೂರ್ನಿ ಅಸಲಿಗೆ ಮೇ 24ರಿಂದ ಜೂನ್ 7ರ ವರೆಗೆ ನಡೆಯಬೇಕಿತ್ತು. ಆದರೆ ಮಾರಕ ಕೋವಿಡ್-19ನಿಂದಾಗಿ ಟೂರ್ನಿಯ ವೇಳಾಪಟ್ಟಿ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ.
'ಟೂರ್ನಿಗಾಗಿ ನಿಗದಿಯಾಗಿದ್ದ ಆರಂಭಿಕ ವೇಳಾಪಟ್ಟಿಯಂತೆ ಪಂದ್ಯಾಟ ನಡೆಸಲು ಸಾಧ್ಯವಾಗದಿರುವುದರಿಂದ ಟೂರ್ನಿಯ ಆರಂಭಿಕ ದಿನಾಂಕಕ್ಕೆ ಟಿಕೇಟ್ ಖರೀದಿಸಿದವರ ಹಣವನ್ನು ಮರುಪಾವತಿ ಮಾಡುತ್ತಿದ್ದೇವೆ,' ಎಂದು ಎಫ್‌ಎಫ್‌ಟಿ ಹೇಳಿದೆ.
'ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಅತಿಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ,' ಎಂದೂ ಎಫ್‌ಎಫ್‌ಟಿ ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications