For Quick Alerts
ALLOW NOTIFICATIONS  
For Daily Alerts

ಮಹಿಳೆ ಬೆನ್ನು ಬೀಳುವ ವಿವಾದಗಳುː ಸಾನಿಯಾ

By Mahesh

ನವದೆಹಲಿ, ನ.26: ಭಾರತದಲ್ಲಿ ಮಹಿಳೆಯರಿಗೆ ಸಮಾನತೆ ಸಿಕ್ಕಿಲ್ಲ, ಸರಿಯಾದ ಗೌರವಾದರಗಳು ಸಿಗುತ್ತಿಲ್ಲ, ಲಿಂಗ ತಾರತಮ್ಯ ಮುಂದುವರೆದಿದೆ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿವಾದಿತ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಮಹಿಳಾ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿರುವ ಭಾರತದ ಹೆಮ್ಮೆಯ ಪುತ್ರಿ ಹಾಗೂ ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಹೇಳಿಕೆ ಹಲವರ ಹುಬ್ಬೇರಿಸಿದೆ. ಭಾರತದಲ್ಲಿ ಲಿಂಗ ಅಸಮಾನತೆ ಅತಿಯಾಗಿದ್ದು, ನಾನು ಸಾನಿಯಾ ಮಿರ್ಜಾ ಆಗಿ (ಹೆಣ್ಣಾಗಿ) ಇಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಭಾರತದಲ್ಲಿ ಹೆಣ್ಣಿಗೆ ಪ್ರಸಕ್ತ ಗೌರವ-ಮನ್ನಣೆ ಇಲ್ಲವಾಗಿದ್ದು, ಲಿಂಗ ಅಸಮಾನತೆ ತೊಡೆಯುವ ಮತ್ತು ಸಾಂಸ್ಕೃತಿಕವಾದ ಬದಲಾವಣೆ ತರುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಒಬ್ಬ ಸ್ಟಾರ್ ಆಟಗಾರ್ತಿಯಾಗಿ ಭಾರತದಲ್ಲಿ ತಾನು ಎದುರಿಸಿದ ಸಂಕಷ್ಟಗಳು, ಸವಾಲುಗಳು ಹಾಗೂ ತಾನು ಅನುಭವಿಸಿದ ಅವಮಾನಗಳ ಬಗ್ಗೆ ವಿವರಿಸಿದ ಸಂದರ್ಭ ಸಾನಿಯಾ ಹೇಳಿದ್ದಾರೆ. ನಾನು ಮಹಿಳೆಯಾದ್ದರಿಂದಲೇ ದೇಶದಲ್ಲಿ ಅನೇಕ ಕಷ್ಟ-ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಒಂದು ವೇಳೆ ನಾನು ಪುರುಷ ಆಟಗಾರನಾಗಿದ್ದರೆ ಎಷ್ಟೋ ವಿವಾದಗಳು ಸೃಷ್ಟಿಯಾಗುತ್ತಲೇ ಇರಲಿಲ್ಲವೇನೋ ಎಂದಿದ್ದಾರೆ.

Gender Inequality Makes Life Difficult for Women in India, Says Sania Mirza

ನನ್ನ ಪ್ರಕಾರ, ಈ ಸಂಸ್ಕೃತಿ ಬದಲಾದರೆ ಭಾರತದಲ್ಲಿ ಇನ್ನೂ ಅನೇಕ ಮಹಿಳೆಯರು ಕ್ರೀಡಾಕ್ಷೇತ್ರಕ್ಕೆ ಪ್ರವೇಶ ಮಾಡಲಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಇದೆ. ಕೇಂದ್ರ ಕ್ರೀಡಾ ಸಚಿವರಾಗಿರುವ ಶರಭಾನಂದ ಸೋನೋವಾಲ್ ಈ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದಾರೆಂಬುದು ನನಗೆ ಗೊತ್ತು. ಸರ್ಕಾರ ಕೂಡ ಲಿಂಗ ಅಸಮಾನತೆ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದು ಸಂತಸದ ವಿಷಯವಾಗಿದೆ.

ಮಾಧ್ಯಮಗಳೂ ಕೂಡ ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸಿವೆ ಎಂದು ಸಾನಿಯಾ ಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣದ ಮಹಿಳೆಯೊಬ್ಬಳನ್ನು ವಿಶ್ವಸಂಸ್ಥೆಯ ಮಹಿಳಾ ಸದ್ಭಾವನಾ ರಾಯಭಾರಿಯನ್ನಾಗಿ ಇದೇ ಮೊದಲ ಬಾರಿಗೆ ನೇಮಕ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾನಿಯಾ ಹೇಳಿದ್ದಾರೆ.

ಮಹಿಳೆಯರೂ ಕೂಡ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು. ಧೈರ್ಯದಿಂದ ಸವಾಲುಗಳನ್ನೆದುರಿಸಬೇಕು. ಮನಸ್ಥಿತಿಗಳು ಬದಲಾಗಬೇಕು. ತಮ್ಮಲ್ಲಿನ ಮೌಲ್ಯಗಳನ್ನು ಮೊದಲು ಮಹಿಳೆ ಅರಿಯಬೇಕು. ಡಿಸೆಂಬರ್ 6ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಡಲು ತಾನು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ ಸಾನಿಯಾ, ನಾನು ಈ ಕ್ಷಣದಿಂದಲೇ ಪಂದ್ಯಕ್ಕಾಗಿ ಅಭ್ಯಾಸ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. (ಪಿಟಿಐ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+