ವಿಂಬಲ್ಡನ್ ː ಸಾನಿಯಾ, ರೋಹನ್ ಬೋಪಣ್ಣ ಶುಭಾರಂಭǃ
ವಿಂಬಲ್ಡನ್(ಇಂಗ್ಲೆಂಡ್), ಜುಲೈ 07: ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯಂನ ಕರ್ಸ್ಟೆನ್ ಫ್ಲಿಪ್‌ಕೆನ್ಸ್ ಅವರು ಶುಭಾರಂಭ ಮಾಡಿದ್ದಾರೆ.
ಟೂರ್ನಿಯಲ್ಲಿ 13ನೇ ಶ್ರೇಯಾಂಕ ಹೊಂದಿರುವ ಸಾನಿಯಾ ಮತ್ತು ಕರ್ಸ್ಟೆನ್ ಜೋಡಿ ಎರಡು ಸೆಟ್ ಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. 6-4, 6-3ರ ನೇರ ಸೆಟ್‌ಗಳಿಂದ ನವೊಮಿ ಒಸಾಕ ಮತ್ತು ಶುಯಿ ಜಾಂಗ್ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಸುಲಭವಾಗಿ ಪ್ರವೇಶಿಸಿದರು.

ಪುರುಷರ ಡಬಲ್ಸ್ ವಿಭಾಗದ ಹಣಾಹಣಿಯಲ್ಲಿ ಪುರವ ರಾಜಾ ಮತ್ತು ದಿವಿಜ್ ಶರಣ್ ಅವರು ಗೆಲುವಿನ ಸಿಹಿ ಸವಿದರು. ಆರಂಭಿಕ ಸುತ್ತಿನ ಹೋರಾಟದಲ್ಲಿ ಪುರವ ಮತ್ತು ದಿವಿಜ್ 7-6, 3-6, 6-4, 7-6ರಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್ ಮತ್ತು ಪೋರ್ಚುಗಲ್‌ನ ಜಾವೊ ಸೌಸಾ ಅವರನ್ನು ಸೋಲಿಸಿದರು.
ಫ್ರೆಂಚ್ ಓಪನ್ ಡಬಲ್ಸ್ ವಿಜೇತ ರೋಹಣ್ ಬೋಪಣ್ಣ ಅವರು ಫ್ರೆಂಚ್ ಆಟಗಾರ ಎಡುವಾರ್ಡ್ ರೋಜರ್ ವಸೆಲಿನ್ ಜತೆಗೂಡಿ ಜರ್ಮನಿಯ ಡಸ್ಟಿನ್ ಬ್ರೌನ್ ಹಾಗು ಮಿಶ್ಚಾ ಜ್ವೆರೆವ್ ಅವರನ್ನು 6-3, 7-6, 6-4ರಲ್ಲಿ ಸೋಲಿಸಿ ಪುರುಷದ ಡಬಲ್ಸ್ ವಿಭಾಗದಲ್ಲಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications