ಅಂಟಲ್ಯ ಓಪನ್: ಭಾರತದ ಗುಣೇಶ್ವರನ್ ದ್ವಿತೀಯ ಸುತ್ತಿಗೆ ಪ್ರವೇಶ

ಅಂಟಲ್ಯ, ಜೂನ್ 25: ಟರ್ಕಿಯ ಅಂಟಲ್ಯದಲ್ಲಿ ನಡೆಯುತ್ತಿರುವ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದಲ್ಲಿ ಭಾರತ ಪ್ರಜ್ಞೇಶ್ ಗುಣೇಶ್ವರನ್ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಸರ್ಬಿಯಾ ಆಟಗಾರ ಜಾಂಕೊ ಟಿಪ್ಸರೆವಿಕ್ ಎದುರು ಮುನ್ನಡೆ ಸಾಧಿಸಿದ ಗುಣೇಶ್ವರನ್ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸೋಮವಾರ (ಜೂನ್ 24) ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಸ್ಲರ್ಧೆಯಲ್ಲಿ 94ನೇ ಶ್ರೇಯಾಂಕಿತ ಗುಣೇಶ್ವರನ್ ಅವರು 286ನೇ ಶ್ರೇಯಾಂಕಿತ ಆಟಗಾರ ಟಿಪ್ಸರೆವಿಕ್ ಎದುರು 6-0, 7-6ರ ಸುಲಭ ಜಯ ದಾಖಲಿಸಿದರು.
ಟಿಪ್ಸರೆವಿಕ್ ವಿರುದ್ಧ ಸುಲಭ ಜಯ ಸಾಧಿಸಿದ ಗುಣೇಶ್ವರನ್ ಮುಂದಿನ ಹಂತದಲ್ಲಿ ಅಮೆರಿಕಾದ ಜೆಸಿ ಅರಗೊನ್ ಮತ್ತು ಸ್ಪೇನ್ ಆಟಗಾರ ರಾಬರ್ಟೊ ಕಾರ್ಬಲ್ಸ್ ವಿರುದ್ಧ ಜಯ ಸಾಧಿಸುವವರ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ. ಈ ಪಂದ್ಯದಲ್ಲೂ ಗುಣೇಶ್ವರನ್ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ.
Story first published: Tuesday, June 25, 2019, 0:04 [IST]
Other articles published on Jun 25, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications