ಕುತೂಹಲಕಾರಿ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ ಫೆಡರರ್-ಸೆರೆನಾ!

ಪರ್ತ್, ಜನವರಿ 1: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯುತ್ತಿರುವ ಹಾಪ್‌ಮನ್ ಕಪ್ ಟೆನಿಸ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರಾದ ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಇಬ್ಬರೂ ಕ್ರಮವಾಗಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಸ್ವಿಜರ್‌ಲ್ಯಾಂಡ್ ಬಲಾಡ್ಯ ಫೆಡರರ್, ಅಮೆರಿಕಾದ ಫ್ರಾನ್ಸಿಸ್ ಟಿಯಾಫೊ ಅವರನ್ನು 6-4, 6-1ರ ನೇರ ಸೆಟ್‌ನಿಂದ ಜಯಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದೆಡೆ ಅಮೆರಿಕಾ ದೈತ್ಯೆ ಸೆರೆನಾ ಅವರು ಸ್ವಿಜರ್‌ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಅವರನ್ನು 4-6, 6-4, 6-3 ಅಂತರದಿಂದ ಕೆಡವಿದ್ದಾರೆ.
ಫೆಡರರ್ ಮತ್ತು ಸೆರೆನಾ ಇಬ್ಬರಿಗೂ ಈಗ 37ರ ಹರೆಯ. ಫೆಡರರ್ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಜಯಿಸಿದ್ದರೆ, ಸೆರೆನಾ ಒಟ್ಟು 23 ಗ್ರ್ಯಾಂಡ್‌ಸ್ಲ್ಯಾಮ್ ತನ್ನದಾಗಿಸಿಕೊಂಡಿದ್ದಾರೆ. ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಫೆಡರರ್‌ಗೆ ಬೆಲಿಂಡಾ ಬೆನ್ಸಿಕ್ ಜೊತೆಯಾದರೆ, ಸೆರೆನಾಗೆ ಫ್ರಾನ್ಸಿಸ್ ಟಿಯಾಫೊ ಜೋಡಿಯಾಗಲಿದ್ದಾರೆ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications