ನಿವೃತ್ತಿಯ ಬಗ್ಗೆ ಮಾತನಾಡಿದ ರೋಜರ್ ಫೆಡರರ್

ಟೆನ್ನಿಸ್ ಲೋಕದ ಮಹಾನ್ ಆಟಗಾರ ರೋಜರ್ ಫೆಡರರ್ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. 39ವರ್ಷದ ಲೆಜೆಂಡರಿ ಆಟಗಾರ ಈ ವರ್ಷವನ್ನು ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿ ಅಂತ್ಯಗೊಳಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಾತನಾಡಿರುವ ರೋಜರ್ ಫೆಡರರ್ ನಿವೃತ್ತಿಯ ಕುರಿತಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ನನ್ನ ದೇಹ ಸ್ಪಂದಿಸದೇ ಇದ್ದಾಗ ಖಂಡಿತಾ ಆ ಕುರಿತಾಗಿ ಯೋಚಿಸೋದಾಗಿ ಹೇಳಿದ್ದಾರೆ.
2009ರಲ್ಲಿ ಮೊದಲ ಬಾರಿಗೆ ನಾನು ಎಲ್ಲಿಯವರೆಗೆ ನಾನು ಟೆನ್ನಿಸ್ ಆಡುತ್ತಿರಬೇಕು ಎಂಬ ಕುರಿತಾಗಿ ಯೋಚನೆಯನ್ನು ಮಾಡಿದ್ದೆ. ಅದಾಗ ಇದೀಗ ಹತ್ತು ವರ್ಷಗಳು ಕಳೆದಿದೆ. ಇಂದಿಗೂ ನಾನು ಆಡುತ್ತಿದ್ದೇನೆ. ಮತ್ತು ನನ್ನ ದೇಹವೂ ಕೂಡ ಆಡಲು ಚೆನ್ನಾಗಿಯೇ ಸಹಕರಿಸುತ್ತಿದೆ. ಇಂತಾ ಸಂರ್ಭದಲ್ಲಿ ಟೆನ್ನಿಸ್‌ನಿಂದ ನಿವೃತ್ತಿಯಾಗಲು ಯಾವುದೇ ಕಾರಣಗಳು ಇಲ್ಲ ಎಂದು ಫೆಡರರ್ ಹೇಳಿದ್ದಾರೆ.
ರೋಜರ್ ಫೆಡರರ್ ತಮ್ಮ ಕೊನೆಯ ಗ್ರಾಂಡ್‌ಸ್ಲ್ಯಾಮ್‌ಅನ್ನು 2018ರ ಜನವರಿಯಲ್ಲಿ ಗೆದ್ದುಕೊಂಡಿದ್ದರು. ಆಸ್ಟ್ರೇಲಿಯನ್ ಓಪನ್‌ಅನ್ನು 6ನೇ ಬಾರಿಗೆ ಗೆಲ್ಲುವ ಮೂಲಕ ಈ ಸಾಧನೆಯನ್ನು ಫೆಡರರ್ ಮಾಡಿದ್ದಾರೆ. ಜಿಮ್ಮಿ ಕಾನರ್ಸ್ ಹೆಸರಿನಲ್ಲಿರುವ 109 ಟೈಟಲ್‌ಗಳನ್ನು ಗೆದ್ದುಕೊಂಡಿರುವ ದಾಖಲೆಗಿಂತ ಫೆಡರರ್ ಕೇವಲ 6 ಟೈಟಲ್‌ನಷ್ಟು ಮಾತ್ರ ಹಿಂದಿದ್ದಾರೆ.
35ರಿಂದ 36 ವರ್ಷದವರೆಗೆ ಟೆನಿಸ್ ಅಂಗಳದಲ್ಲಿ ಆಡಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ ಇನ್ನೂ ಕೂಡ ಆಡುತ್ತಿದ್ದೇನೆ. ಯಾವಾಗ ವಿದಾಯನೀಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು 20 ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಫೆಡರರ್ ಹೇಳಿದ್ದಾರೆ
ವಯಸ್ಸಾಗುತ್ತಿದ್ದಂತೆಯೇ ಪ್ರತಿಯೊಂದು ಕೂಡ ಕಷ್ಟಕರವಾಗಲು ಪ್ರಾರಂಭವಾಗುತ್ತದೆ. ಆದರೆ ಅನುಭವಗಳು ಅದನ್ನು ಮರೆಮಾಚಿ ಸುಲಭವಾಗಿಸುತ್ತದೆ ಎಂದು ದಕ್ಷಿಣ ಅಮೆರಿಕಾದಲ್ಲಿ ಪ್ರದರ್ಶನ ಪಂದ್ಯಕ್ಕೂ ಮುನ್ನ ತಮ್ಮ ಅನುಭವದ ಮಾತುಗಳನ್ನು ಫೆಡರರ್ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications