ಒಸ್ಟ್ರಾವಾದಲ್ಲಿ 2021ರ ಸೀಸನ್‌ನ ಚೊಚ್ಚಲ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಝಾ

ಒಸ್ಟ್ರಾವಾ: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ 2021ರ ಸೀಸನ್ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. ಒಸ್ಟ್ರಾವಾ ಓಪನ್‌ನಲ್ಲಿ ಪಾಲ್ಗೊಂಡಿದ್ದ ಸಾನಿಯಾ ಮಹಿಳಾ ಡಬಲ್ಸ್‌ನಲ್ಲಿ ತನ್ನ ಜೊತೆಗಾತಿ ಚೀನಾದ ಜಾಂಗ್ ಶುವಾಯ್ ಜೊತೆ ಸೇರಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಭಾನುವಾರ (ಸೆಪ್ಟೆಂಬರ್ 26) ನಡೆದ ಮಹಿಳಾ ಡಬಲ್ಸ್ ಫೈನಲ್ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಝಾ ಮತ್ತು ಜಾಂಗ್ ಶುವಾಯ್ ಜೋಡಿ ಕೈಟ್ಲಿನ್ ಕ್ರಿಶ್ಚಿಯನ್ (ಯುಎಸ್‌ಎ) ಮತ್ತು ಎರಿನ್ ರೌಟ್ಲಿಫ್ (ನ್ಯೂಜಿಲೆಂಡ್) ಎದುರು 6-3, 6-2ರ ಅಂತರದ ಗೆಲುವು ದಾಖಲಿಸಿದ್ದಾರೆ.
ಸಾನಿಯಾ-ಶುವಾಯ್ ಮತ್ತು ಕ್ರಿಶ್ಚಿಯನ್ ಮತ್ತು ಎರಿನ್ ರೌಟ್ಲಿಫ್ ಮಧ್ಯೆ 1 ಗಂಟೆ 4 ನಿಮಿಷಗಳ ಕಾಳಗ ನಡೆಯಿತು. ಇಂಡೋ-ಚೀನಾ ಜೋಡಿ ಅಮರಿಕನ್-ನ್ಯೂಜಿಲೆಂಡ್ ಜೋಡಿಯ ವಿರುದ್ಧ ಆರಂಭದಿಂದಲೂ ಉತ್ತಮ ಆಟ ನೀಡಿತು. ಹೀಗಾಗಿಯೇ ಇಂಡೋ-ಚೀನಾ ಜೋಡಿ ನೇರ ಸೆಟ್ ಜಯ ದಾಖಲಿಸಿದೆ.
34ರ ಹರೆಯದ ಸಾನಿಯಾ ಮತ್ತು ಶುವಾಯ್ ಜೋಡಿ WTA 500 ಸೆಮಿಫೈನಲ್‌ನಲ್ಲಿ ಚೀನಾ ಜೋಡಿಯನ್ನು 6-2 7-5ರ ಅಂತರಿದಿಂದ ಸೋಲಿಸಿತ್ತು. ಡಬಲ್ಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಾನಿಯಾ ಮಾಜಿ ವಿಶ್ವ ನಂ.1 ಆಟಗಾರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications