For Quick Alerts
ALLOW NOTIFICATIONS  
For Daily Alerts

Tennis: ಆಸ್ಟ್ರೇಲಿಯನ್‌ ಓಪನ್ ಎರಡನೇ ಸುತ್ತಿನಲ್ಲಿ ನಗಾಲ್‌ಗೆ ಸೋಲು

ಭಾರತದ ಸ್ಟಾರ್ ಟೆನಿಸ್ ಆಟಗಾರ ಸುಮಿತ್ ನಗಾಲ್‌ ಆಸ್ಟ್ರೇಲಿಯನ್ ಓಪನ್ 2024 ರಲ್ಲಿ ತಮ್ಮ ಅಭಿಯಾನ ಮುಗಿಸಿದ್ದಾರೆ. ಮೊದಲ ಸುತ್ತಿನಲ್ಲಿ ಶ್ರೇಯಾಂಕಿತ ಆಟಗಾರನನ್ನು ಮಣಿಸಿ ಸುದ್ದಿಯಲ್ಲಿದ್ದ ಸುಮಿತ್, ಎರಡನೇ ಸುತ್ತಿನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು. ಗುರುವಾರ ನಡೆದ ಪುರುಷರ ಎರಡನೇ ಸುತ್ತಿನ ಪಂದ್ಯದಲ್ಲಿ ನಗಾಲ್ 6-2, 3-6, 5-7, 4-6 ರಿಂದ ಚೀನಾದ ಜುಂಚೆಂಗ್ ಶಾಂಗ್ ಎದುರು ಸೋಲು ಕಂಡರು.

ಭಾರತದ ಟೆನಿಸ್ ತಾರೆ ಸುಮಿತ್ ನಗಲ್ ಮೊದಲ ಸುತ್ತಿನಲ್ಲಿ ವಿಶ್ವದ 27 ನೇ ಶ್ರೇಯಾಂಕದ ಆಟಗಾರನನ್ನು ಸೋಲಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿದರು. ಈ ಮೂಲಕ ನಗಾಲ್ ಪ್ರಯಾಣವು ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಕೊನೆಗೊಂಡಿತು. ನಾಲ್ಕು ಸೆಟ್‌ಗಳ ಪಂದ್ಯದಲ್ಲಿ ಚೀನಾದ ಆಟಗಾರ ವಿರುದ್ಧ ನಾಗಲ್ 3-1 ಅಂತರದಲ್ಲಿ ಸೋಲನುಭವಿಸಿದರು.

Indian star tennis player Sumit Nagals run in Australian Open ends in second round

ನಾಗಲ್ ಅವರು ಮೊದಲ ಸುತ್ತಿನಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಚೀನಾದ ಯುವ ಆಟಗಾರರಿಂದ ಕಠಿಣ ಪೈಪೋಟಿ ಎದುರಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿನಲ್ಲಿ ಚೀನಾದ ಆಟಗಾರ ಜುಂಚೆಂಗ್ ಶಾಂಗ್ ವಿರುದ್ಧ ಸುಮಿತ್ ನಗಾಲ್ ಉತ್ತಮ ಆರಂಭವನ್ನು ಮಾಡಿದರು. ಮೊದಲ ಸೆಟ್ ಅನ್ನು 6-2 ರಿಂದ ಗೆದ್ದ ಸುಮಿತ್ ಅಬ್ಬರಿಸಿದರು. ಇದರ ನಂತರ, ನಗಾಲ್ ಸ್ವಲ್ಪ ದಣಿದಂತೆ ಕಂಡುಬಂದರು.

ಚೀನಾದ ಆಟಗಾರ ಇದರ ಸಂಪೂರ್ಣ ಲಾಭವನ್ನು ಪಡೆದರು ಅಲ್ಲದೆ ಎರಡನೇ ಸೆಟ್‌ ಅನ್ನು 6-3 ರಿಂದ ಗೆದ್ದರು ಮತ್ತು ಮೂರನೇ ಸೆಟ್‌ನಲ್ಲಿಯೂ 7-5 ರಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಪುಟಿದೇಳುವ ಸೂಚನೆಯನ್ನು ನೀಡಿದರು. ಆದರೆಡಲು ನಾಗಲ್ ಪ್ರಯತ್ನಿಸಿದರು ಆದರೆ ಅವರು 6-4 ರಿಂದ ಸೋಲನ್ನು ಎದುರಿಸಬೇಕಾಯಿತು.

Indian star tennis player Sumit Nagals run in Australian Open ends in second round

ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿರುವ ಚೀನಾದ ಆಟಗಾರ ಜುಂಚೆಂಗ್ ಶಾಂಗ್ ಅವರು ವಿಶ್ವದ 2ನೇ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.

ನಗಲ್ ಎರಡನೇ ಸುತ್ತಿನಲ್ಲಿ ಸೋತ ನಂತರ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ನಿರಾಸೆ ಅನುಭವಿಸಿದರು. 35 ವರ್ಷಗಳ ನಂತರ, ಭಾರತೀಯ ಟೆನಿಸ್ ಆಟಗಾರನೊಬ್ಬ ಸಿಂಗಲ್ಸ್ ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ್ದು ಭಾರತೀಯ ಟೆನಿಸ್ ಇತಿಹಾಸದಲ್ಲಿ ಇದೇ ಮೊದಲು. ಈ ಪ್ರದರ್ಶನದಿಂದ ನಾಗಲ್ ಅವರು 180,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 95 ಲಕ್ಷ ರೂ.) ಪಡೆಯುತ್ತಾರೆ.

ಎನ್ ಶ್ರೀರಾಮ್ ಬಾಲಾಜಿ ಮತ್ತು ರೊಮೇನಿಯಾದ ವಿಕ್ಟರ್ ವ್ಲಾಡ್ ಕಾರ್ನಿಯಾ ಶುಕ್ರವಾರ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಮತ್ತು ಆಂಡ್ರಿಯಾ ಪೆಲ್ಲೆಗ್ರಿನೊ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

Story first published: Thursday, January 18, 2024, 16:44 [IST]
Other articles published on Jan 18, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+