For Quick Alerts
ALLOW NOTIFICATIONS  
For Daily Alerts

ಟ್ಯಾಂಪೆರ್ ಓಪನ್ ಪ್ರಶಸ್ತಿ ಗೆದ್ದ ಭಾರತದ ಟೆನಿಸ್ ಆಟಗಾರ ಸುಮಿತ್ ನಗಾಲ್

ಫಿನ್‌ಲ್ಯಾಂಡ್‌ನಲ್ಲಿ ನಡೆದ ಟ್ಯಾಂಪೆರ್ ಓಪನ್ 2023 ರ ಫೈನಲ್‌ನಲ್ಲಿ ಭಾರತದ ಸುಮಿತ್ ನಗಾಲ್ ಎಟಿಪಿ ಚಾಲೆಂಜರ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದು ಭಾರತೀಯ ಟೆನಿಸ್ ಆಟಗಾರನ ನಾಲ್ಕನೇ ಎಟಿಪಿ ಚಾಲೆಂಜರ್ ಟೂರ್ ಪ್ರಶಸ್ತಿಯಾಗಿದೆ. ಅಲ್ಲದೆ 25ರ ಹರೆಯದ ಸುಮಿತ್ ನಗಾಲ್ ಅವರು ವರ್ಷದ ಎರಡನೇ ಎಟಿಪಿ ಚಾಲೆಂಜರ್ ಈವೆಂಟ್ ಅನ್ನು ಗೆದ್ದಂತಾಗಿದೆ.

ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಡಾಲಿಬೋರ್ ಸ್ವರ್ಸಿನಾ ಅವರನ್ನು ಎದುರಿಸಿದ ನಗಾಲ್ 6-4, 7-5 ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಸುಮಿತ್ ನಗಾಲ್ ರೋಮ್‌ನಲ್ಲಿ ಗಾರ್ಡನ್ ಓಪನ್ ಗೆದ್ದು ನಾಲ್ಕು ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. ಇದೀಗ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಟೆನಿಸ್ ಆಟಗಾರ 2019 ಮತ್ತು 2017 ರಲ್ಲಿ ಬ್ಯೂನಸ್ ಐರಿಸ್ ಮತ್ತು ಬೆಂಗಳೂರು ಚಾಲೆಂಜರ್ಸ್‌ನಲ್ಲಿ ಗೆಲ್ಲುವ ಮೂಲಕ ಮೊದಲ ಎರಡು ATP ಚಾಲೆಂಜರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

Indian tennis player Sumit Nagal Won Tampere Open 2023

ಕಳೆದ ಏಪ್ರಿಲ್‌ನಲ್ಲಿ ರೋಮ್‌ನಲ್ಲಿ ಗೆದ್ದು ಈಗ ಟ್ಯಾಂಪೆರ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಸುಮಿತ್ ನಗಾಲ್ ಯುರೋಪಿಯನ್ ನೆಲದಲ್ಲಿ ಎರಡು ATP ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ ನಂ. 231ನೇ ರ್ಶರೇಯಾಂಕಿದ ಟೆನಿಸ್ ಆಟಗಾರನಾಗಿರುವ ಸುಮಿತ್ ಭಾರತದ ಅಗ್ರ ಶ್ರೇಯಾಂಕದ ಪುರುಷರ ಸಿಂಗಲ್ಸ್ ಆಟಗಾರರಾಗಿದ್ದಾರೆ. ಈ ಪಂದ್ಯದಲ್ಲಿ ನಿಧಾನವಾದ ಆರಂಭವನ್ನು ಪಡೆದುಕೊಂಡಿದ್ದರು. ಮೊದಲ ಗೇಮ್‌ನಲ್ಲಿ ವಿಶ್ವದ ನಂ. 193 ಸ್ವರ್ಸಿನಾ ಅವರ ವಿರುದ್ಧ 4-1 ರಿಂದ ಹಿನ್ನಡೆಯಲ್ಲಿದ್ದರು. ಹಾಗಿದ್ದರೂ ಭಾರತೀಯ ಆಟಗಾರ ನಂತರ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದಾರೆ. ಈ ಸೆಣೆಸಾಟ ಒಟ್ಟು ಒಂದು ಗಂಟೆ 44 ನಿಮಿಷಗಳ ಕಾಲ ನಡೆದಿದ್ದು ಜೆಕ್ ರಿಪಬ್ಲಿಕ್‌ನ ಸ್ವರಿಂಕ ಅವರಿಂದ ಕಠಿಣ ಸವಾಲನ್ನು ಸುಮಿತ್ ಎದುರಿಸಬೇಕಾಯಿತು.

Story first published: Monday, July 24, 2023, 23:16 [IST]
Other articles published on Jul 24, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+