For Quick Alerts
ALLOW NOTIFICATIONS  
For Daily Alerts

ಟೆನಿಸ್‌ನಲ್ಲಿ 2ನೇ ಇನಿಂಗ್ಸ್‌ಗಾಗಿ 26 ಕೆಜಿ ತೂಕ ಇಳಿಸಿದ ಸಾನಿಯಾ!

sania mirza 2nd innings 2019

ಹೊಸದಿಲ್ಲಿ, ಆಗಸ್ಟ್‌ 01: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್‌ ವೃತ್ತಿ ಬದುಕಿನ ಮೊದಲ ಇನಿಂಗ್ಸ್‌ನಲ್ಲೇ ಬಹಳಷ್ಟು ಸಾಧನೆಯನ್ನು ಮಾಡಿದ್ದು, ತಮ್ಮ ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚಿನದ್ದೇನು ಸಾಬೀತು ಪಡಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅನುಭವಿ ಡಬಲ್ಸ್‌ ಆಟಗಾರ್ತಿ 32 ವರ್ಷದ ಸಾನಿಯಾ, ಚೊಚ್ಚಲ ತಾಯ್ತನ ಸಲುವಾಗಿ ಟೆನಿಸ್‌ ವೂತ್ತಿ ಬದುಕಿನಿಂದ ಹೊರಗುಳಿದಿದ್ದರು. ಇದೀಗ ಮರಳಿ ಟೆನಿಸ್‌ ಕಡೆಗೆ ಗಮನ ನೀಡಲು ಸಜ್ಜಾಗಿರುವ ಬಹುಬಾರಿಯ ಗ್ರ್ಯಾನ್‌ ಸ್ಲ್ಯಾಮ್‌ ಡಬಲ್ಸ್‌ ಚಾಂಪಿಯನ್‌ ಸಾನಿಯಾ, 2020ರ ಜನವರಿಯಲ್ಲಿ ಅಖಾಡಕ್ಕಿಳಿಯಲಿದ್ದಾರೆ.

ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಎರಡು ವರ್ಷಗಳ ಬಳಿಕ ಟೆನಿಸ್‌ ವೃತ್ತಿ ಬದುಕಿಗೆ ಮರಳುವುದನ್ನು ಎದುರು ನೋಡುತ್ತಿರುವ ಸಾನಿಯಾ, ಇದಕ್ಕಾಗಿ ಪ್ರತಿ ದಿನ ನಾಲ್ಕು ಗಂಟೆಗಳ ಕಠಿಣ ಅಭ್ಯಾಸದಲ್ಲಿ ನಿರತಾಗಿದ್ದು, ಬರೋಬ್ಬರಿ 26 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ತಾಯ್ತನ ಸಲುವಾಗಿ ವೃತ್ತಿ ಬದುಕಿನಿಂದ ದೂರ ಉಳಿಯುವ ಮುನ್ನ ಸಾನಿಯಾ ಒಟ್ಟು 6 ಗ್ರ್ಯಾನ್‌ ಸ್ಲ್ಯಾಮ್‌ ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದಿದ್ದರು. ಇದರಲ್ಲಿ ಮೂರು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಬಂದಿರುವುದಾಗಿದೆ. ಅಷ್ಟೇ ಅಲ್ಲದೆ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ವಿಶ್ವದ ನಂ.1 ಡಬಲ್ಸ್‌ ಆಟಗಾರ್ತಿ ಎನಿಸಿಕೊಂಡಿದ್ದರು. ಸ್ವಿಜರ್ಲೆಂಡ್‌ನ ದಂತಕತೆ ಮಾರ್ಟಿನಾ ಹಿಂಗಿಸ್‌ ಅವರೊಟ್ಟಿಗೆ ವರ್ಷದ ಕೊನೆಯಲ್ಲಿ ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್‌ ಟೂರ್ನಿಯಲ್ಲೂ ಸಾನಿಯಾ ಪ್ರಶಸ್ತಿ ಎತ್ತಿ ಹಿಡಿದಿದ್ದರು.

"ನನ್ನ ವೃತ್ತಿ ಬದುಕಿನಲ್ಲಿ ಕನಸಿನಲ್ಲೂ ಸಂದಾಜಿಸದೇ ಇರುವಷ್ಟು ಸಾಧನೆಗಳನ್ನು ಮಾಡಿದ್ದೇನೆ. ಹೀಗಾಗಿ ನನ್ನ ಮುಂದಿನ ಅಭಿಯಾನದಲ್ಲಿ ಏನೇ ಆದರು ಅದು ನನಗೆ ಸಿಗುವ ಬೋನಸ್‌ ಆಗಲಿದೆ. ಮುಂದಿನ ಆಗಸ್ಟ್‌ ಹೊತ್ತಿಗೆ ವೃತ್ತಿ ಬದುಕಿಗೆಮರಳಬಲ್ಲೆ ಎಂದೆಣಿಸಿದ್ದೆ. ಆದರೆ, ಜನವರಿ ವರೆಗೂ ಕಾಯಬೇಕಾಗಬಹುದು," ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.

"ಇಝಾನ್‌ (ಪುತ್ರ) ಜನನ ನನಗೆ ಸಿಕ್ಕ ಬಹುದೊಡ್ಡ ಆಶೀರ್ವಾದ. ಇದೀಗ ಮರಳಿ ನನ್ನ ವೃತ್ತಿ ಬದುಕು ಆರಂಭಿಸುವುದು ಸಾಧ್ಯವಾದರೆ ಅದ್ಭುತ ಅನುಭವ ನೀಡಲಿದೆ. ನನ್ನ ಮಗನೇ ನನಗೆ ಸ್ಫೂರ್ತಿ. ವೃತ್ತಿ ಬದುಕಿಗೆ ಮರಳಿದರೆ ನಾನು ಸಾಬೀತು ಪಡಿಸಬೇಕಾಗಿರುವುದು ಏನೂ ಇಲ್ಲ. ವೃತ್ತಿ ಪರ ಟೆನಿಸ್‌ ಆಡುವುದು ನನಗೆ ಅತ್ಯಂತ ಪ್ರಿಯವಾದದ್ದು. ಆದ್ದರಿಂದಲೇ ಹಿಂದಿರುಗಲಿದ್ದೇನೆ," ಎಂದು ಸಾನಿಯಾ ವಿವರಿಸಿದ್ದಾರೆ.

"ನನ್ನ ದೇಹ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಸಂಪೂಣ್ ಸಜ್ಜಾಗದ ಹೊರತಾಗಿ ಸ್ಪರ್ಧೆಗೆ ಇಳಿಯುವುದಿಲ್ಲ. ಸಜ್ಜಾಗದೇ ಕಣಕ್ಕಿಳಿದು ಗಾಯದ ಸಮಸ್ಯೆ ಎದುರಿಸಲು ನಾನು ಸಿದ್ಧಳಿಲ್ಲ," ಎಂದು ಸಾನಿಯಾ ಹೇಳಿದ್ದಾರೆ.

ಅಂದಹಾಗೆ ಟೆನಿಸ್‌ ಇತಿಹಾಸದಲ್ಲಿ ತಾಯ್ತನದ ಬಳಿಕ ಯಶಸ್ಸು ಕಂಡವರ ಸಂಖ್ಯೆ ಬಹಳ ಕಡಿಮೆ. ಕೇವಲ ಸಾರ್ವಕಾಲಿಕ ದಿಗ್ಗಜರಾದ ಮಾರ್ಗರೇಟ್‌ ಕೋರ್ಟ್‌, ಎವೋನಿ ಗೂಲಾಗೊಂಗ್‌ ಹಾಗೂ ಕಿಮ್‌ ಕ್ಲೈಸ್ಟರ್ಸ್‌ ಮಾತ್ರವೇ ಸಿಂಗಲ್ಸ್‌ ವಿಭಾಗದಲ್ಲಿ ತಾಯ್ತನದ ಬಳಿಕವೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

ಈಗಿನ ತಲೆಮಾರಿನ ಆಟಗಾರ್ತಿಯರ ಪೈಕಿ ಮಾಜಿ ನಂ.1ಗಳಾದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಹಾಗೂ ಬೆಲರೂಸ್‌ನ ವಿಕ್ಟೋರಿಯಾ ಅಝಾರೆಂಕಾ ತಾಯ್ತನದ ಬಳಿಕ ಮರಳಿ ವೃತ್ತಿ ಬದುಕು ಆರಂಭಿಸಿದ್ದಾರೆ. ಆದರೆ ಯಾವುದೇ ಮೇಜರ್‌ ಪ್ರಶಸ್ತಿಗಳನ್ನು ಗೆಲ್ಲು ಸಾಧ್ಯವಾಗಿಲ್ಲ.

Story first published: Thursday, August 1, 2019, 16:40 [IST]
Other articles published on Aug 1, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+