For Quick Alerts
ALLOW NOTIFICATIONS  
For Daily Alerts

Australian Open: ಇತಿಹಾಸ ಸೃಷ್ಟಿಸಿದ ಸುಮಿತ್ ನಗಾಲ್‌: ಮೊದಲ ಸುತ್ತು ಗೆದ್ದರೇ ಸಿಗುವ ಹಣವೆಷ್ಟು?

ಭಾರತದ ಸ್ಟಾರ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಅದ್ಭುತ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆದಿದ್ದಾರೆ. ಕಳೆದ 35 ವರ್ಷಗಳ ಇತಿಹಾಸದಲ್ಲಿ ಭಾರತದ ಒಬ್ಬ ಪ್ಲೇಯರ್‌ ಶ್ರೇಯಾಂಕಿತ ಆಟಗಾರರನ್ನು ಮಣಿಸಿದ ಸಾಧನೆ ಮಾಡಿದ್ದು ಇದೇ ಮೊದಲು.

ಸುಮಿತ್ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ 31 ನೇ ಶ್ರೇಯಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿದರು. ನಾಗಲ್ ಆರಂಭದಿಂದಲೂ ಎರಡು ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರು, ಆದರೆ ಮೂರನೇ ಸುತ್ತಿನಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿ ಬುಬ್ಲಿಕ್ ಅವರನ್ನು ಸೋಲಿಸಿದರು. ಈ ಪಂದ್ಯದಲ್ಲಿ ಸುಮಿತ್ ನಗಾಲ್ 6-4, 6-2, 7-6 (5) ಸೆಟ್‌ಗಳಿಂದ ಗೆದ್ದರು.

Indian tennis star Sumit Nagal in 2nd round with historic win

ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸುಮಿತ್‌ ಅಬ್ಬರಿಸಿದರು. ಮೂರು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದ ಭಾರತೀಯ ಆಟಗಾರ ಎಲ್ಲರ ಚಿತ್ತ ಕದ್ದರು. ಇದೇ ಮೊದಲ ಬಾರಿಗೆ ಸುಮಿತ್‌ ಆಸ್ಟ್ರೇಲಿಯನ್ ಓಪನ್‌ ಎರಡನೇ ಸುತ್ತಿಗೆ ಪ್ರವೇಶ ಪಡೆದು ಬೀಗಿದ್ದಾರೆ. ಎರಡು ಗಂಟೆ 38 ನಿಮಿಷಗಳ ನಡೆದ ಹೋರಾಟದಲ್ಲಿ ಸುಮಿತ್ ಮನಮೋಹಕ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿಕೊಂಡರು.

ಸುಮಿತ್ ನಗಾಲ್ ಅವರು 1989 ರಿಂದ ಸಿಂಗಲ್ಸ್ ಡ್ರಾದಲ್ಲಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ ಮೊದಲ ಭಾರತೀಯ ಆಟಗಾರ. ಇದಕ್ಕೂ ಮೊದಲು ರಮೇಶ್ ಕೃಷ್ಣನ್ ಈ ಸಾಧನೆ ಮಾಡಿದ್ದರು. ರಮೇಶ್ ಎರಡನೇ ಸುತ್ತಿನಲ್ಲಿ ಸ್ವೀಡನ್‌ನ ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿದರು. ವಿಲಾಂಡರ್ ಆಗ ಟೆನಿಸ್ ಶ್ರೇಯಾಂಕದಲ್ಲಿ ವಿಶ್ವದ ಅಗ್ರ ಆಟಗಾರರಾಗಿದ್ದರು.

ನಾಗಲ್ ಅವರು 2013ರ ಬಳಿಕ ಸಿಂಗಲ್ಸ್‌ನ ಎರಡನೇ ಸುತ್ತಿಗೆ ತಲುಪಿದ ಮೊದಲ ಭಾರತೀಯ ಪುರುಷರ ಆಟಗಾರ. ಸೋಮದೇವ್ ದೇವಬರ್ಮನ್ 2013 ರಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

Indian tennis star Sumit Nagal in 2nd round with historic win

35 ವರ್ಷಗಳ ನಂತರ ಭಾರತದ ಪುರುಷ ಟೆನಿಸ್ ಆಟಗಾರನೊಬ್ಬ ಸಿಂಗಲ್ಸ್ ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ್ದು ಇದೇ ಮೊದಲು. ಸುಮಿತ್ ನಗಲ್ ಅವರ ಎಟಿಪಿ ಶ್ರೇಯಾಂಕ 137 ಆಗಿದ್ದು. ಗುರುವಾರ ನಡೆಯಲಿರುವ ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ 18 ವರ್ಷದ ಚೀನಾದ ಉದಯೋನ್ಮುಖ ಆಟಗಾರ ಶಾಂಗ್ ಜುಂಚೆಂಗ್ ಅವರನ್ನು ಎದುರಿಸಲಿದ್ದಾರೆ.

ಸುಮಿತ್ ಎರಡನೇ ಬಾರಿಗೆ ಗ್ರ್ಯಾನ್‌ ಸ್ಲ್ಯಾಮ್‌ನ ಪ್ರಧಾನ ಸುತ್ತನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು 2020 ರ ಯುಎಸ್ ಓಪನ್‌ನಲ್ಲಿ, ಅವರು ಮುಖ್ಯ ಡ್ರಾದಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅವರು ಏಳನೇ ಬಾರಿಗೆ 100 ಶ್ರೇಯಾಂಕ ಹೊಂದಿರುವ ಆಟಗಾರರನ್ನು ಸೋಲಿಸಿದರು. ಎದುರಾಳಿ ಆಟಗಾರನ ಶ್ರೇಯಾಂಕದ ವಿಷಯದಲ್ಲಿ ಇದು ಸುಮಿತ್ ಅವರ ಎರಡನೇ ದೊಡ್ಡ ಗೆಲುವು.

ಮೊದಲ ಸುತ್ತು ಗೆದ್ದರೆ ಸಿಗುವ ಹಣವೆಷ್ಟು?

ಸುಮಿತ್ ನಗಾಲ್‌ ಮೊದಲ ಸುತ್ತಿನಲ್ಲಿ ಜಯ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲ, ಈ ಪಂದ್ಯ ಗೆದ್ದ ನಂತರ ಕನಿಷ್ಠ 1,20,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 66 ಲಕ್ಷ ರೂ.) ಪಡೆಯುವುದು ಖಚಿತವಾಗಿದೆ. ಎರಡನೇ ಸುತ್ತಿನಲ್ಲೂ ಗೆದ್ದರೆ ಅವರಿಗೆ ಈ ಮೊತ್ತ 1,80,000 ಆಸ್ಟ್ರೇಲಿಯನ್ ಡಾಲರ್ ಸಿಗಲಿದೆ.

Story first published: Tuesday, January 16, 2024, 17:34 [IST]
Other articles published on Jan 16, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+