ಯೂಎಸ್ ಓಪನ್: ಅರ್ಧಕ್ಕೆ ಆಟ ನಿಲ್ಲಿಸಿ ಹೊರ ನಡೆದ ನೊವಾಕ್ ಜೊಕೊವಿಕ್!

ನ್ಯೂಯಾರ್ಕ್, ಸೆಪ್ಟೆಂಬರ್ 2: ಟೆನಿಸ್ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ, ಯೂಎಸ್ ಓಪನ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್, ಭಾನುವಾರ (ಸೆಪ್ಟೆ೦ಬರ್ 1) ನಡೆದ ಯೂಎಸ್ ಓಪನ್ ನಾಲ್ಕನೇ ಸುತ್ತಿನ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಿ ಹೊರ ನಡೆದಿದ್ದಾರೆ.
ವಿಶ್ವ ನಂ.1 ಆಟಗಾರ, ಸರ್ಬಿಯಾ ದೈತ್ಯ ಜೊಕೊವಿಕ್, 23ನೇ ವಿಶ್ವ ಶ್ರೇಯಾಂಕಿತ, ಸ್ವಿಸ್ ಆಟಗಾರ ಸ್ಟ್ಯಾನ್ ವಾವ್ರಿಂಕಾ ವಿರುದ್ಧ ಆಡುತ್ತಿದ್ದಾಗ ಭುಜದ ನೋವಿನ ಕಾರಣ ಆಟವನ್ನು ಅರ್ಧಕ್ಕೆ ನಿಲ್ಲಿಸಿದರು. ಆಟ ನಿಲ್ಲಿಸುವ ಹೊತ್ತಿಗೆ ವಾವ್ರಿಂಕಾ 6-4, 7-5, 2-1ರ ಮುನ್ನಡೆಯಲ್ಲಿದ್ದರು.
'ಆಟವನ್ನು ಮುಗಿಸುವ ರೀತಿ ಇದು ಯಾವತ್ತಿಗೂ ಅಲ್ಲ. ನನ್ನನ್ನು ಕ್ಷಮಿಸು ನೊವಾಕ್. ಆತನೊಬ್ಬ (ಜೊಕೋವಿಕ್) ಅದ್ಬುತ ಚಾಂಪಿಯನ್,' ಎಂದು ವಾವ್ರಿಂಕಾ ಪ್ರತಿಕ್ರಿಯಿಸಿದ್ದಾರೆ. ಸ್ಟ್ಯಾನ್, 2016ರ ಯೂಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದವರು. ಆ ವರ್ಷ ಜೊಕೊವಿಕ್ ರನ್ನರ್ಸ್ ಪ್ರಶಸ್ತಿ ಪಡೆದಿದ್ದರು.
Story first published: Monday, September 2, 2019, 18:36 [IST]
Other articles published on Sep 2, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications