ಜೊಕೋವಿಕ್ ಸೋಲಿಸಿ 10ನೇ ಇಟಾಲಿಯನ್ ಓಪನ್ ಪ್ರಶಸ್ತಿ ಗೆದ್ದ ನಡಾಲ್

ರೋಮ್: 'ಕಿಂಗ್ ಆಫ್ ಕ್ಲೇ' ಖ್ಯಾತಿಯ ರಾಫೆಲ್ ನಡಾಲ್ 10ನೇ ಬಾರಿಗೆ ಇಟಾಲಿಯನ್ ಓಪನ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಭಾನುವಾರ (ಮೇ 16) ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ ನೊವಾಕ್ ಜೋಕೋವಿಕ್ ಮಣಿಸಿರುವ ನಡಾಲ್, ಪ್ರಶಸ್ತಿ ಗೆದ್ದಿದ್ದಾರೆ.
ರೋಮ್ ಸ್ಟೇಡಿಯಂನಲ್ಲಿ ನಡೆದಿದ್ದ ಇಟಾಲಿಯನ್ ಓಪನ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್ ಅವರು ಸರ್ಬಿಯಾ ಶ್ರೇಷ್ಠ ಆಟಗಾರ ನೊವಾಕ್ ಜೊಕೋವಿಕ್ ಅವರನ್ನು 7-5, 1-6, 6-3ರ ಅಂತರದಿಂದ ಹಿಮ್ಮೆಟ್ಟಿಸಿದರು. ಇಬ್ಬರ ಮಧ್ಯೆ ಸುಮಾರು 2 ಗಂಟೆ 49 ನಿಮಿಷಗಳ ಕಾದಾಟ ನಡೆಯಿತು.
ವಿಶ್ವ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನದಲ್ಲಿರುವ ನಡಾಲ್, ಇಟಾಲಿಯನ್ ಓಪನ್ ಹಾಲಿ ಚಾಂಪಿಯನ್ ಆಗಿದ್ದ ಜೊಕೋವಿಕ್ ವಿರುದ್ಧ ಮೇಲುಗೈ ಸಾಧಿಸಿದರು. ಟೆನಿಸ್ ವೃತ್ತಿ ಬದುಕಿನಲ್ಲಿ ಭಾನುವಾರ ನಡಾಲ್ ಮತ್ತು ಜೊಕೋವಿಕ್ ಇದು 57ನೇ ಬಾರಿ ಮುಖಾಮುಖಿಯಾಗಿದ್ದರು.
'ಇದು 10ನೇ ಬಾರಿಗೆ ಈ ಟ್ರೋಫಿ ಗೆಲ್ಲುತ್ತಿರುವುದಕ್ಕೆ ಖುಷಿಯಾಗಿದೆ. ಇದು ನನ್ನ ಪಾಲಿಗೆ ಅಸಾಧ್ಯ ಅನ್ನಿಸಿದ್ದ ಸಂಗತಿಗಳಲ್ಲೊಂದು,' ಎಂದು ಪ್ರಶಸ್ತಿ ಗೆದ್ದ ಬಳಿಕ ನಡಾಲ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications