ಐಟಿಎಫ್ ಟೆನಿಸ್ ಟೂರ್ನಿ 2023: ರಾಮಕುಮಾರ್ ರಾಮನಾಥನ್‌ಗೆ ಸಿಂಗಲ್ಸ್ ಕಿರೀಟ
ಧಾರವಾಡ: ನಾಲ್ಕನೇ ಶ್ರೇಯಾಂಕಿತ ಆಟಗಾರ ರಾಮಕುಮಾರ ರಾಮನಾಥನ್ ಸಿಂಗಲ್ಸ್ ಪಂದ್ಯದಲ್ಲಿ ವಿಜಯಿಯಾಗುವುದ ಮೂಲಕ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಆಯೋಜನೆಗೊಂಡಿದ್ದ ಐಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿ 2023ಕ್ಕೆ ತೆರೆಬಿದ್ದಿದೆ. ಈ ಕ್ರೀಡಾಕೂಟದಲ್ಲಿ ರಾಮನಾಥನ್ ಅವರು ಮೂರನೇ ಶ್ರೇಯಾಂಕಿತ ಆಟಗಾರ ದಿಗ್ವಿಜಯ ಪ್ರತಾಪಸಿಂಗ್ ಅವರಿಗೆ ಸೋಲುಣಿಸಿದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಚಾಂಪಿಯನ್ ಪಟ್ಟಕ್ಕೇರುವ ಮೂಲಕ ರಾಮನಾಥನ್ ಅವರು 25 ಸಾವಿರ ಡಾಲರ್ ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ದಿಗ್ವಿಜಯ ಅವರ ವಿರುದ್ಧ ರಾಮನಾಥಮ್ ಅವರು 7-6 (5), 7-6 (6) ಅಂಕಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅತ್ಯಂತ ತುರುಸಿನಿಂದ ನಡೆದ ಸಿಂಗಲ್ಸ್ ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ರಾಮನಾಥನ್ ತಮ್ಮ ಕೌಶಲ್ಯಪೂರ್ಣ ಹೊಡೆತಗಳು ಮತ್ತು ಆಕ್ರಮಣಶೀಲ ಆಟದಿಂದ ಎದುರಾಳಿಯನ್ನು ಕಂಗೆಡಿಸಿದರು. ಹೀಗಾಗಿ ಮೊದಲ ಸೆಟ್‌ನ್ನು 7-6 (5) ತಮ್ಮದಾಗಿಸಿಕೊಂಡರು. ಎರಡನೆ ಸೆಟ್‌ನಲ್ಲಿ ತಿರುಗಿ ಬಿದ್ದ ದಿಗ್ವಿಜಯ ಪ್ರತಾಪಸಿಂಗ್ ತೀವ್ರ ಪ್ರತಿಸ್ಪರ್ಧೆಯೊಡ್ಡಿ ಹೋರಾಟ ನೀಡಿದರು.
ಆದರೆ ಅನುಭವಿ ರಾಮನಾಥನ್ ಸಂಯೋಜಿತ ಆಟದಿಂದಾಗಿ ಟೈಬ್ರೇಕರ್ ಆಯಿತು. ದಿಗ್ವಿಜಯಸಿಂಗ್ 3-0 ಅಂಕಗಳ ಲೀಡ್ ಪಡೆದರು. ಆದರೂ ಕೆಲವು ತಪ್ಪುಗಳಿಂದಾಗಿ ಜಯ ದಕ್ಕಲಿಲ್ಲ. ಇಷ್ಟಾಗಿಯೂ ದಿಗ್ವಿಜಯ ಪ್ರತಾಪಸಿಂಗ್ ತಾವೊಬ್ಬ ಅರ್ಹ ಅಂತಿಮ ಸುತ್ತು ಪ್ರವೇಶಿಸಿದ ಆಟಗಾರ ಎನ್ನುವುದನ್ನು ಸಾಬೀತುಗೊಳಿಸಿದರು.
ಕಳೆದ ಕೆಲವು ವಾರಗಳಿಂದ ನಾನು ಸಹಜ ಆಟಕ್ಕೆ ಹೊಂದಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದೆ. ಈ ಜಯ ನಮ್ಮ ಮುಂದಿನ ಪಂದ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಆಡಲು ಸಹಾಯಕವಾಗಲಿದೆ ಎಂದು ವಿಜೇತ ರಾಮಕುಮಾರ ರಾಮನಾತನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications