ಐಟಿಎಫ್ ಧಾರವಾಡ ವಿಶ್ವ ಟೆನ್ನಿಸ್ ಟೂರ್ 2023; 2ನೇ ಸುತ್ತಿನ ಅರ್ಹತಾ ಪಂದ್ಯಗಳಿಗೆ ಮುನ್ನಡೆದ ಭಾರತೀಯ ಆಟಗಾರರು
ಧಾರವಾಡ, ಅಕ್ಟೋಬರ್ 15: ಭಾರತದ ಮಾಜಿ ಡೇವಿಸ್ ಕಪ್ ವಿಜೇತ ಹಾಗೂ ಒಲಿಂಪಿಯನ್ ವಿಷ್ಣುವರ್ಧನ್ ಅವರು 2023ರ ಐಟಿಎಫ್ ಧಾರವಾಡ ಪುರುಷರ ವಿಶ್ವ ಟೆನಿಸ್ ಟೂರ್‌ನಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಪ್ರಾರಂಭಿಸಿದರು.
ಪಾರ್ಥ್ ಅಗರ್ವಾಲ್ ಅವರ ಸವಾಲನ್ನು ಹಿಮ್ಮೆಟ್ಟಿಸಿ 25,000 ಯುಎಸ್ ಡಾಲರ್ ಈವೆಂಟ್‌ನ ಅರ್ಹತಾ ಸುತ್ತಿನ ಎರಡನೇ ಸುತ್ತಿಗೆ ಪ್ರವೇಶಿಸಿದರು. ಈ ಟೂರ್ನಿಯು ಭಾನುವಾರದಂದು ಧಾರವಾಡ ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್ ಕೋರ್ಟ್‌ನಲ್ಲಿ ನಡೆಯಿತು.

ಏಷ್ಯನ್ ಗೇಮ್ಸ್ ಪದಕ ವಿಜೇತ ವಿಷ್ಣುವರ್ಧನ್ ಅವರು ಪಾರ್ಥ್ ಅಗರ್ವಾಲ್ ವಿರುದ್ಧ 6-3, 6-2 ಅಂತರದಲ್ಲಿ ಗೆಲುವು ಸಾಧಿಸಿದರು.
ಇನ್ನು ಸೂರಜ್ ಪ್ರಬೋಧ್ ಅವರು ಆರನೇ ಶ್ರೇಯಾಂಕದ ಅಥರ್ವ ಶರ್ಮಾ ವಿರುದ್ಧ 6-2, 6-3 ಅಂತರದಲ್ಲಿ ಸುಲಭ ಗೆಲುವಿನ ನಂತರ, ತವರಿನ ಪ್ರೇಕ್ಷಕರನ್ನು ಸಂತೋಷಪಡಿಸಿದರು. ಈ ಮೂಲಕ ಅರ್ಹತಾ ಸುತ್ತಿನ ಅಂತಿಮ ಸುತ್ತಿಗೆ ಮುನ್ನಡೆದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸ್ಥಳೀಯ ಆಟಗಾರ ಅಮರ್ ಧರಿಯಣ್ಣವರ್ ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ತೋರಿದರು. ಈ ಮೊದಲು 2-6, 0-6 ಅಂತರದಿಂದ ವಿಯೆಟ್ನಾಂನ ಹ್ಯಾ ಮಿನ್ಹ್ ಡಕ್ ವು ವಿರುದ್ಧ ಸೋಲು ಕಂಡರು.
ಇನ್ನೊಂದು ಪಂದ್ಯದಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಕರ್ನಾಟಕ ರಾಜ್ಯ ಟೆನ್ನಿಸ್ ತಂಡದಲ್ಲಿ ಸೇರ್ಪಡೆಗೊಂಡಿರುವ ದೀಪಕ್ ಅನಂತರಾಮು ತಡವಾಗಿ ಹೋರಾಟ ನಡೆಸಿದರೂ, ವ್ಯರ್ಥ ಪ್ರಯತ್ನವಾಗಿ 0-6, 4-6 ಅಂತರದಿಂದ ಮೂರನೇ ಶ್ರೇಯಾಂಕದ ಫೈಸಲ್ ಕಮರ್ ವಿರುದ್ಧ ಸೋಲು ಕಂಡರು.
ಮಧ್ಯಂತರ ಮಳೆಯಿಂದಾಗಿ ಏಳು ಪಂದ್ಯಗಳನ್ನು ಸೋಮವಾರ, ಅಕ್ಟೋಬರ್ 16ಕ್ಕೆ ಮುಂದೂಡಲು ಪ್ರಕ್ರಿಯೆಗಳು ವಿಳಂಬವಾಯಿತು. ಅರ್ಹತಾ ಸುತ್ತಿನ ಅಂತಿಮ ಸುತ್ತಿನ ಪಂದ್ಯವೂ ಸೋಮವಾರ ನಡೆಯಲಿದೆ.
ಫಲಿತಾಂಶಗಳು: ಅರ್ಹತಾ ಸುತ್ತು-1
* 1ನೇ ಶ್ರೇಯಾಂಕದ ವಿಷ್ಣುವರ್ಧನ್ 6-3, 6-2 ಅಂತರದಿಂದ ಪಾರ್ಥ್ ಅಗರ್ವಾಲ್ ವಿರುದ್ಧ ಗೆಲುವು.
* 3ನೇ ಫೈಸಲ್ ಕಮರ್ 6-0, 6-4 ಅಂತರದಿಂದ ದೀಪಕ್ ಅನಂತರಾಮು ವಿರುದ್ಧ ಗೆಲುವು.
* 12ನೇ ಶ್ರೇಯಾಂಕದ ಹಾ ಮಿನ್ಹ್ ಡಕ್ ವು (ವಿಯೆಟ್ನಾಂ) 6-2, 6-0 ಅಂತರದಿಂದ ಅಮರ್ ಧರಿಯಣ್ಣವರ್ ವಿರುದ್ಧ ಗೆಲುವು.
* 5ನೇ ಶ್ರೇಯಾಂಕದ ರಂಜೀತ್ ವಿರಾಲಿ-ಮುರುಗೇಶನ್ 6-1, 6-2 ಅಂತರದಿಂದ ಯಶ್ ಚೌರಾಸಿಯಾ ವಿರುದ್ಧ ಗೆಲುವು.
* 2ನೇ ಶ್ರೇಯಾಂಕದ ಲ್ಯೂಕ್ ಸೊರೆನ್ಸೆನ್ (ಆಸ್ಟ್ರೇಲಿಯಾ) 7-6 (4), 6-3 ಅಂತರದಿಂದ ಬಿಟಿ ಅರ್ಜುನ್ ಮಹಾದೇವನ್ ವಿರುದ್ಧ ಗೆಲುವು.
* 4ನೇ ಶ್ರೇಯಾಂಕದ ಜಾಕ್ ಕಾರ್ಲ್ಸನ್ ವಿಸ್ಟ್ರಾಂಡ್ (ಸ್ವೀಡನ್) 6-2, 6-3 ಅಂತರದಿಂದ ಬಿಟಿ ಧೀರಜ್ ಕೊಡಂಚ ಶ್ರೀನಿವಾಸನ್ ವಿರುದ್ಧ ಗೆಲುವು.
* 9ನೇ ಶ್ರೇಯಾಂಕದ ಎನ್ರಿಕೊ ಜಿಯಾಕೊಮಿನಿ (ಇಟಲಿ) 6-1, 6-3 ಅಂತರದಿಂದ ಜೇಕ್ ಭಂಗ್ಡಿಯಾ (ಯುಎಸ್ಎ) ವಿರುದ್ಧ ಗೆಲುವು.
* 11ನೇ ಶ್ರೇಯಾಂಕದ ಮಾಧ್ವಿನ್ ಕಾಮತ್ 7-6 (2), 6-1 ಅಂತರದಿಂದ ಮ್ಯಾಥ್ಯೂ ವೊರ್ಂಡಲ್ (ಆಸ್ಟ್ರೇಲಿಯಾ) ವಿರುದ್ಧ ಗೆಲುವು.
* ಸೂರಜ್ ಆರ್ ಪ್ರಬೋಧ್ 6-2, 6-3 ಅಂತರದಿಂದ 6ನೇ ಶ್ರೇಯಾಂಕದ ಅಥರ್ವ ಶರ್ಮಾ ವಿರುದ್ಧ ಗೆಲುವು. (Image courtesy : Deepthi Indukuri, KSLTA )
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications