For Quick Alerts
ALLOW NOTIFICATIONS  
For Daily Alerts

Australian Open: ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಟೆನಿಸ್ ತಾರೆ ಜಾನಿಕ್ ಸಿನ್ನರ್

ರಾಡ್ ಲೇವರ್ ಅರೆನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್-1 ಟೆನಿಸ್ ತಾರೆ ಜಾನಿಕ್ ಸಿನ್ನರ್ ಮೂರನೇ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾರೆ. ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಜಾನಿಕ್ ಸಿನ್ನರ್ 6-3, 7-6 (7-4), 6-3 ರಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದು ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದು ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಮೂರು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ ಮೊದಲ ಇಟಾಲಿಯನ್ ಟೆನಿಸ್ ಆಟಗಾರನಾಗಿ ಸಿನ್ನರ್ ಇತಿಹಾಸ ನಿರ್ಮಿಸಿದ್ದಾರೆ. ಇದಲ್ಲದೆ, 1959 ಮತ್ತು 1960 ರಲ್ಲಿ ಫ್ರೆಂಚ್ ಓಪನ್ ಗೆದ್ದ ನಿಕೋಲಾ ಪಿಟ್ರಾಂಗೆಲಿ ಅವರನ್ನು ಸಿನ್ನರ್ ಹಿಂದಿಕ್ಕಿದ್ದಾರೆ.

ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಜಾನಿಕ್ ಸಿನ್ನರ್ 2 ಗಂಟೆ 42 ನಿಮಿಷಗಳಲ್ಲಿ ಸೋಲಿಸಿದರು. ಕಳೆದ 13 ತಿಂಗಳ ಅವಧಿಯಲ್ಲಿ ಸಿನ್ನರ್‌ಗೆ ಇದು ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. ಸಿನ್ನರ್ 2024 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು, ನಂತರ ಅವರು ಯುಎಸ್ ಓಪನ್ ಚಾಂಪಿಯನ್ ಆದರು. ಈಗ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ಹೆಸರಿನಲ್ಲಿ ಮೂರನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ಸಾಧನೆ ಮಾಡಿದ್ದಾರೆ.

Jannik Sinner wins second Australian Open title in men s singles

ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಜ್ವೆರೆವ್ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಅವರು ಮೂರು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳನ್ನು ಆಡಿದ್ದಾರೆ. ಆದರೆ ಒಮ್ಮೆಯೂ ಚಾಂಪಿಯನ್ ಆಗಲಿಲ್ಲ. 2020 ರಲ್ಲಿ ಫ್ಲಶಿಂಗ್ ಮೆಡೋಸ್‌ನಲ್ಲಿ ಡೊಮಿನಿಕ್ ಥೀಮ್‌ ಮತ್ತು ಕಳೆದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಕಾರ್ಲೋಸ್ ಅಲ್ಕಾರಾಜ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಸಿನ್ನರ್ ವಿರುದ್ಧದ ಸೋಲಿನಿಂದ ಜ್ವೆರೆವ್ ಅವರ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ.

ಸಿನ್ನರ್ ದಾಖಲೆ

ಸಿನ್ನರ್ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 1968 ರಿಂದ ಆರಂಭವಾದ ಓಪನ್ ಯುಗದಲ್ಲಿ ಗ್ರ್ಯಾಮ್ ಸ್ಲಾಮ್ ಫೈನಲ್‌ನಲ್ಲಿ 3-0 ಅಂತರಗಳಲ್ಲಿ ವೃತ್ತಿಜೀವನವನ್ನು ಶುರು ಮಾಡಿದ ಎಂಟನೇ ಆಟಗಾರ ಎಂಬ ಹೆಗ್ಗಳಿಕೆ ಸಿನ್ನರ್ ಪಾತ್ರರಾಗಿದ್ದಾರೆ. ಈ ಹಿಂದೆ ಸಿನ್ನರ್ ಅವರು 2020ರ ಯುಎಸ್ ಓಪನ್ ಮತ್ತಿ 2024ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸೋಲನುಭವಿಸಿದ್ದರು.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಯುಎಸ್ ಆಟಗಾರ್ತಿ ಮ್ಯಾಡಿಸನ್ ಕೀಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಸಬಲೆಂಕಾ ವಿರುದ್ಧ ಗೆದ್ದು ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮ್ಯಾಡಿಸನ್ ಕೀಸ್ ಮುಡಿಗೇರಿಸಿಕೊಂಡಿದ್ದರು.

Story first published: Sunday, January 26, 2025, 19:52 [IST]
Other articles published on Jan 26, 2025
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+