Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬರ್ಲಿನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ನವೋಮಿ ಒಸಾಕಾ

Japan star Naomi Osaka pulls out of Berlin Tournament

ಬರ್ಲಿನ್: ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ವಿವಾದಾತ್ಮಕವಾಗಿ ಹೊರ ನಡೆದಿದ್ದ, ವಿಶ್ವ ನಂ.2 ಆಟಗಾರ್ತಿ ಜಪಾನ್‌ನ ನವೋಮಿ ಒಸಾಕಾ ಬರ್ಲಿನ್ ಡಬ್ಲ್ಯೂಟಿಎ (ವಿಮೆನ್ಸ್ ಟೆನಿಸ್ ಅಸೋಸಿಯೇಶನ್) ಟೂರ್ನಿಯಿಂದಲೂ ಹಿಂದೆ ಸರಿದಿದ್ದಾರೆ. ಆಯೋಜಕರು ಈ ಸಂಗತಿಯನ್ನು ಖಾತರಿಪಡಿಸಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್ ಎಂದು ಕರೆಯಲ್ಪಡುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ವಿವಾದಾತ್ಮಕವಾಗಿ ಹೊರ ನಡೆದು ಸರಿಯಾಗಿ ಒಂದು ವಾರದ ಬಳಿಕ ನವೋಮಿ ಒಸಾಕಾ ಬರ್ಲಿನ್ ಟೂರ್ನಿಯಿಂದಲೂ ಹೊರಗುಳಿಯುವ ನಿರ್ಧಾರ ತಿಳಿಸಿದ್ದಾರೆ ಎಂದು ಆಯೋಜಕರು ಸೋಮವಾರ (ಜೂನ್ 6) ಮಾಹಿತಿ ನೀಡಿದ್ದಾರೆ.

ಮೂರು ಬಾರಿ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಒಸಾಕಾ ಮುಂದಿನ ಟೂರ್ನಿಯಲ್ಲಿ ಯಾವಾಗ ಮೈದಾನಕ್ಕಿಳಿಯಲಿದ್ದಾರೆ ಅನ್ನೋದನ್ನು ಇನ್ನೂ ತಿಳಿಸಿಲ್ಲ. 23ರ ಹರೆಯದ ನವೋಮಿ ಒಸಾಕಾ ಫ್ರೆಂಚ್ ಓಪನ್‌ ಆರಂಭಿಕ ಸುತ್ತಿನಲ್ಲಿ ಗೆದ್ದ ಬಳಿಕ ಟೂರ್ನಿಯಿಂದ ಹೊರ ನಡೆದಿದ್ದರು.

ಫ್ರೆಂಚ್ ಓಪನ್‌ ಆರಂಭಿಕ ಸುತ್ತಿನಲ್ಲಿ ಒಸಾಕಾ, ರೋಮ್ ಆಟಗಾರ್ತಿ ಪೆಟ್ರೀಷಿಯಾ ಮಾರಿಯಾ ಟಿಗ್ ಎದುರು 6-4, 7-6(4) ಜಯ ಗಳಿಸಿದ ಬಳಿಕ ಕರೆಯಲಾದ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದ್ದರು. ಒಸಾಕಾ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳದಿರುವುದು ಆಯೋಜಕರಿಗೆ ಸರಿಕಾಣಿಸಿರಲಿಲ್ಲ. ಹೀಗಾಗಿಯೇ ಒಸಾಕಾಗೆ ದಂಡ ವಿಧಿಸಲಾಗಿತ್ತು.

ಆ ಬಳಿಕ ಒಸಾಕಾ ಫ್ರೆಂಚ್ ಓಪನ್ ಟೂರ್ನಿಯಿಂದಲೇ ಹೊರ ನಡೆದಿದ್ದರು. ಸುದ್ದಿಗೋಷ್ಠಿಯಲ್ಲಿ ತಾನು ಪಾಲ್ಗೊಳ್ಳದಿರಲು ತನ್ನ ಮಾನಸಿಕ ಸ್ಥಿತಿ ಸರಿಯಿಲ್ಲದಿರುವುದು ಎಂದು ಒಸಾಕಾ ಕಾರಣ ನೀಡಿದ್ದರು.

Story first published: Monday, June 7, 2021, 18:49 [IST]
Other articles published on Jun 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+