Rohan Bopanna: ಪ್ರಧಾನಿ ಮೋದಿ ಭೇಟಿ ಮಾಡಿದ ರೋಹನ್ ಬೋಪಣ್ಣ
ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅವರು ಕಳೆದ ವಾರ ಆಸ್ಟ್ರೇಲಿಯನ್ ಓಪನ್ 2024 ಪ್ರಶಸ್ತಿಯನ್ನು ಗೆದ್ದ ರಾಕೆಟ್ ಅನ್ನು ಪ್ರಧಾನಿಗೆ ನೀಡಿದರು.
ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ, ಬೋಪಣ್ಣ ಅವರು ಪ್ರಧಾನಿ ಮೋದಿಯೊಂದಿಗೆ ಆಸ್ಟ್ರೇಲಿಯನ್ ಓಪನ್ ಕಪ್ ಮತ್ತು ರಾಕೆಟ್ ಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಮೆಲ್ಬೋರ್ನ್‌ನಲ್ಲಿ ವಿಜಯವನ್ನು ಶ್ಲಾಘಿಸಿದ್ದಕ್ಕಾಗಿ ಅವರಿಗೆ ರೋಹನ್ ಬೋಪಣ್ಣ, ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬೋಪಣ್ಣ ಈ ಬಗ್ಗೆ ಬರೆದುಕೊಂಡಿದ್ದಾರೆ. 'ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರನ್ನು ಇಂದು ಭೇಟಿ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಗೌರವವು ನನಗೆ ದೊಡ್ಡದಾಗಿದೆ ಮತ್ತು ನನ್ನನ್ನು ವಿಶ್ವ ನಂ. 1 ಮತ್ತು ಆಸ್ಟ್ರೇಲಿಯನ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮಾಡಿದ ರಾಕೆಟ್ ಅನ್ನು ಪ್ರಧಾನಿಗೆ ನೀಡಲು ನಾನು ಹೆಮ್ಮೆಪಡುತ್ತೇನೆ. ನಿಮ್ಮ ವಾತ್ಸಲ್ಯ ನನಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ನೀಡಿದೆ" ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಬೋಪಣ್ಣ ಅವರನ್ನು ಶ್ಲಾಘಿಸಿದ ಮೋದಿ ಅವರು ಮುಂದಿನ ಪಂದ್ಯಾವಳಿಗಳಿಗೆ ಶುಭ ಹಾರೈಸಿದರು. ಬೋಪಣ್ಣ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮೋದಿ ಬರೆದಿದ್ದಾರೆ. ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ನಿಮ್ಮ ಸಾಧನೆ ಭಾರತಕ್ಕೆ ಹೆಮ್ಮೆ ತಂದಿದೆ. ಮತ್ತು ನಿಮ್ಮ ಸಮರ್ಪಣೆ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಭವಿಷ್ಯಕ್ಕಾಗಿ ಶುಭಾಶಯಗಳು ಎಂದು ಬರೆದು ಕೊಂಡಿದ್ದಾರೆ.

43 ವರ್ಷ ವಯಸ್ಸಿನ ಬೆಂಗಳೂರು ಮೂಲದ ಬೋಪಣ್ಣ, ದಂತಕಥೆಗಳಾದ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ನಂತರ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ಭಾರತೀಯ ಆಟಗಾರ ಮತ್ತು ಡಬಲ್ಸ್‌ನಲ್ಲಿ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಬೋಪಣ್ಣ ಅವರು 2023 ರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ರುತುಜಾ ಭೋಸ್ಲೆ ಅವರೊಂದಿಗೆ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.
2017ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದ ಬೋಪಣ್ಣ, ಇತ್ತೀಚೆಗೆ ಎಟಿಪಿ ಟೂರ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಇತ್ತೀಚೆಗೆ ಪ್ಯಾರಿಸ್ ಮಾಸ್ಟರ್ಸ್ ಮತ್ತು ಅಡಿಲೇಡ್ ಇಂಟರ್‌ನ್ಯಾಶನಲ್‌ನಲ್ಲಿ ಸೋಲುಗಳನ್ನು ಅನುಭವಿಸಿದ್ದರು.
ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ 7-6, 7-5ರಲ್ಲಿ ಶ್ರೇಯಾಂಕ ರಹಿತ ಇಟಾಲಿಯನ್ ಜೋಡಿ ಆಂಡ್ರೆ ವಾವಸೋರಿ ಮತ್ತು ಸಿಮೋನ್ ಬೊಲೆಲ್ಲಿ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಬೋಪಣ್ಣ ಮತ್ತು ಎಬ್ಡೆನ್ ಇಬ್ಬರೂ ತಮ್ಮ ಅನುಭವದ ಲಾಭವನ್ನು ಪಡೆದುಕೊಂಡು ಮೊದಲ ಸೆಟ್ ಟೈಬ್ರೇಕರ್ ಅನ್ನು 7-0 ಅಂತರದಿಂದ ಗೆದ್ದರು ಮತ್ತು ಎರಡನೇ ಸೆಟ್‌ನಲ್ಲಿ ತಮ್ಮ ಎದುರಾಳಿಗಳಿಗೆ ತುಂಬಾ ಬಲಶಾಲಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications