ಕರ್ನಾಟಕದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಜೋಡಿಯ ಮುಡಿಗೆ ಆಸ್ಟ್ರೇಲಿಯನ್ ಓಪನ್
ಆಸ್ಟ್ರೇಲಿಯನ್ ಓಪನ್‌ನಿಂದ ಭಾರತದ ಕ್ರೀಡಾ ಅಭಿಮಾನಿಗಳಿಗೆ ಸಿಹಿಸುದ್ದಿ ಬಂದಿದೆ. ಭಾರತದ ಅನುಭವಿ ರೋಹನ್ ಬೋಪಣ್ಣ ಅವರ ಜೊತೆಗಾರ ಮ್ಯಾಟ್ ಎಬ್ಡನ್ ಅವರ ಜೋಡಿ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು ಕೊಂಡಿದೆ.
ಆಸ್ಟ್ರೇಲಿಯನ್ ಓಪನ್‌ನ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಟ್ ಎಬ್ಡನ್ ಜೋಡಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ವಾವಸೋರಿ ಜೋಡಿಯನ್ನು ಸೋಲಿಸಿತು. ರೋಹನ್ ಬೋಪಣ್ಣ ಮತ್ತು ಮ್ಯಾಟ್ ಎಬ್ಡನ್ 7-6, 7-5 ರಲ್ಲಿ ಸಿಮೋನ್ ಬೊಲೆಲ್ಲಿ ಮತ್ತು ವಾವಸೋರಿ ಜೋಡಿಯನ್ನು ಸೋಲಿಸಿತು. ಈ ಮೂಲಕ ರೋಹನ್ ಬೋಪಣ್ಣ ಗ್ರ್ಯಾನ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ರೋಹನ್ ಬೋಪಣ್ಣ ಮೊದಲು, ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ನೆದರ್ಲೆಂಡ್ಸ್‌ನ ಜೀನ್- ಜೂಲಿಯನ್ ರೋಜರ್. ಜೀನ್ ಜೂಲಿಯನ್ ರೋಜರ್ ಅವರು 40 ವರ್ಷ ಮತ್ತು 9 ತಿಂಗಳ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು.
ಅಂತಿಮ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಟ್ ಎಬ್ಡನ್ ಜೋಡಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ವಾವಸೋರಿ ಜೋಡಿಯಿಂದ ಕಠಿಣ ಪೈಪೋಟಿ ಎದುರಿಸಿದರೂ ತಾವು ಹಾಕಿಕೊಂಡಿದ್ದ ರಣ ತಂತ್ರದಂತೆ ಪಂದ್ಯವನ್ನು ಆಡಿ ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಭರ್ಜರಿ ಸರ್ವ್ ಹಾಗೂ ಗ್ಯಾಪ್ ಶಾಟ್, ಬ್ಯಾಕ್ ಹ್ಯಾಂಡ್ ಶಾಟ್ ಗಳ ಮೂಲಕ ಗಮನ ಸೆಳೆಸರು. ಪರಿಣಾಮ ಎದುರಾಳಿ ಆಟಗಾರರು ಇವರ ತಂತ್ರವನ್ನು ಮೀರಿ ಅಂಕಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಸೆಟ್ ಟೈ ಬ್ರೇಕರ್ ವರೆಗೆ ಹೋಯಿತು. ಟೈ ಬ್ರೇಕರ್‌ನಲ್ಲಿ ಬೋಪಣ್ಣ ಮತ್ತು ಎಬ್ಡನ್ ಜೋಡಿ ಒಂದೇ ಒಂದು ಗೇಮ್‌ನಲ್ಲಿ ಸೋಲನುಭವಿಸಲಿಲ್ಲ. ಈ ಫೈನಲ್ ಪಂದ್ಯ 1 ಗಂಟೆ 39 ನಿಮಿಷಗಳ ಕಾಲ ನಡೆಯಿತು. ಆದರೆ ಅಂತಿಮವಾಗಿ ರೋಹನ್ ಬೋಪಣ್ಣ ಮತ್ತು ಮ್ಯಾಟ್ ಎಬ್ಡನ್ ಜೋಡಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ವಾವಸೋರಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದಕ್ಕೂ ಮೊದಲು ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಸೆಮಿಫೈನಲ್‌ನಲ್ಲಿ ತೋಮಸ್ ಮಖಚ್ ಮತ್ತು ಜಾಂಗ್ ಝಿಜೆನ್ ಅವರನ್ನು ಸೋಲಿಸಿದ್ದರು. ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಮೂರು ಪಂದ್ಯಗಳ ಸೆಟ್‌ಗಳಲ್ಲಿ 6-6, 3-6 ಮತ್ತು 7-6 (10-7) ತೋಮಸ್ ಮಖಾಚ್ ಮತ್ತು ಜಾಂಗ್ ಜಿಜೆನ್ ಅವರನ್ನು ಸೋಲಿಸಿದರು. ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್‌ನಲ್ಲಿ ಗೆದ್ದ ನಂತರ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂಬರ್-1 ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications