Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೊಹಾನ್ನಾಗೆ ಸೋಲು, ಕರೋಲಿನಾ ಪ್ಲಿಸ್ಕೋವಾ ಇಟಲಿ ಓಪನ್ ಚಾಂಪಿಯನ್

Karolina Pliskova sweeps past Johanna Konta to win Italian Open

ರೋಮ್, ಮೇ 20: ರೋಮ್‌ನಲ್ಲಿ ಭಾನುವಾರ (ಮೇ 19) ನಡೆದ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ವಿಟಿಎ) ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಝೆಕ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಚಾಂಪಿಯನ್‌ ಆಗಿ ಮಿಂಚಿದ್ದಾರೆ. ಬ್ರಿಟನ್ ಆಟಗಾರ್ತಿ ಜೊಹಾನ್ನಾ ಕೊಂಟಾಗೆ ಸೋಲುಣಿಸಿ ಪ್ಲಿಸ್ಕೋವಾ ಟ್ರೋಫಿ ಜಯಿಸಿದರು.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಪ್ಲಿಸ್ಕೋವಾ, ಜೊಹಾನ್ನಾ ಅವರನ್ನು 6-3, 6-4ರ ನೇರ ಸೆಟ್‌ನಿಂದ ಪರಾಭವಗೊಳಿಸಿದರು. ಈ ಗೆಲುವಿನೊಂದಿಗೆ ಪ್ಲಿಸ್ಕೋವಾ ಟೆನಿಸ್ ರ್ಯಾಂಕಿಂಗ್‌ನಲ್ಲಿ ಜಪಾನ್ ಬಲಿಷ್ಠೆ ನವೋಮಿ ಒಸಾಕಾ ಬಳಿಕ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ.

2017ರ ಫ್ರೆಂಚ್ ಓಪನ್ ಸೆಮಿಫೈನಲ್ ಸ್ಪರ್ಧಿ ಕರೋಲಿನಾ, ಈ ಟ್ರೋಫಿಯೊಂದಿಗೆ ವೃತ್ತಿ ಜೀವನದ 13ನೇ ಪ್ರಶಸ್ತಿ ಜಯಿಸಿದಂತಾಗಿದೆ. ಪುರುಷರ ಸಿಂಗಲ್ಸ್ ವಿಭಾಗದ ಇಟಾಲಿಯನ್ ಓಪನ್‌ ಟ್ರೋಫಿ ಸ್ಪೇನ್‌ನ ರಾಫೆಲ್ ನಡಾಲ್ ಪಾಲಾಗಿದೆ. ನಡಾಲ್ ಅವರು ನೊವಾಕ್ ಜೊಕೋವಿಕ್ (ಸರ್ಬಿಯಾ) ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.

Story first published: Monday, May 20, 2019, 11:43 [IST]
Other articles published on May 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+