25 ಲಕ್ಷ ರು. ಬಹುಮಾನಕ್ಕೆ ಭಾಜನರಾಗಲಿದ್ದಾರಾ ಪೇಸ್?
ಅಂಟಾಲ್ಯ (ಟರ್ಕಿ), ಜೂನ್ 29: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು, ಇಲ್ಲಿ ನಡೆಯುತ್ತಿರುವ ಅಂಟಾಲ್ಯ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದು, ಸುಮಾರು 25 ಲಕ್ಷ ರು. ಮೊತ್ತದ ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಮಂಗಳವಾರ ರಾತ್ರಿ ನಡೆದ ಈ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಟೂರ್ನಿಯ 4ನೇ ಶ್ರೇಯಾಂಕಿತ ಜೋಡಿಯಾದ ಲಿಯಾಂಡರ್ ಪೇಸ್ ಹಾಗೂ ಆದಿಲ್ ಶಮಶ್ದಿನ್ (ಕೆನಡಾ), ಅರ್ಜೆಂಟೀನಾದ ಕಾರ್ಲೋಸ್ ಬೆರ್ಲಾಕ್ ಹಾಗೂ ಪೋರ್ಚುಗಲ್ ಜವಾವೊ ಸೌಸಾ ಜೋಡಿ ವಿರುದ್ಧ 6-1, 6-2 ಸೆಟ್ ಗಳ ಅಂತರದಲ್ಲಿ ಮಣಿಸಿ, ಫೈನಲ್ ಗೆ ಕಾಲಿಟ್ಟಿತು.

ಈ ವಿಭಾಗದಲ್ಲಿ ಜಯ ಗಳಿಸಿದವರಿಗೆ 50 ಲಕ್ಷ ರು. ಬಹುಮಾನವಿದ್ದು, ಫೈನಲ್ ಪಂದ್ಯ ಸೋತವರು ಅಂದಾಜು 26 ಲಕ್ಷ ರು.ಗಳ ನಗದು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಹಾಗಾಗಿ, ಪೇಸ್ ಜೋಡಿ ಈ ಫೈನಲ್ ಪಂದ್ಯ ಗೆದ್ದರೆ, ತಲಾ 25 ಲಕ್ಷ ರು. ಗಳಿಸಬಹುದಾಗಿದೆ.
ಮಂಗಳವಾರವೇ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರವ್ ರಾಜಾ ಹಾಗೂ ಡಿವಿಜ್ ಶರಣ್ ಜೋಡಿ ವೀರೋಚಿತ ಸೋಲು ಕಂಡಿದೆ. ಭಾರೀ ರೋಚಕವಾಗಿದ್ದ ಈ ಪಂದ್ಯದಲ್ಲಿ ಭಾರತದ ಜೋಡಿ, ಆಸ್ಟ್ರಿಯಾದ ಒಲಿವರ್ ಮರಾಕ್ ಹಾಗೂ ಕ್ರೊವೇಷಿಯಾದ ಮ್ಯಾಟೆ ಪೇವಿಕ್ ಜೋಡಿ ವಿರುದ್ಧ 6-7 (9-11), 7-6 (7-4) ಹಾಗೂ 4- 10 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications