Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್ ಗೆದ್ದ ಟೆನ್ನಿಸ್ ತಾರೆ ಪೇಸ್-ಹಿಂಗೀಸ್ ಜೋಡಿ

ಮೆಲ್ಬೋರ್ನ್, ಫೆ.1: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ತಾರೆ ಲಿಯಾಂಡರ್ ಪೇಸ್ ಅವರು 15ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಸ್ವಿಸ್ ತಾರೆ ಮಾರ್ಟಿನಾ ಹಿಂಗೀಸ್ ಜತೆಗೂಡಿ ಮಿಶ್ರ ಡಬಲ್ಸ್ ಕಿರೀಟ ಧರಿಸಿದ್ದಾರೆ.

ಏಳನೇ ಸೀಡ್ ಪಡೆದಿದ್ದ ಪೇಸ್-ಹಿಂಗೀಸ್ ಜೋಡಿ ಅವರು ಮೂರನೇ ಸೀಡೆಡ್ ಡೇನಿಯಲ್ ನೆಸ್ಟರ್ ಹಾಗೂ ಕ್ರಿಸ್ಟೀನಾ ಮ್ಲಾಡೆನೊವಿಕ್ ಜೋಡಿಯನ್ನು 6-4, 6-3ರ ನೇರ ಸೆಟ್ ಗಳಲ್ಲಿ ಸೋಲಿಸಿದರು.

ಫೈನಲ್ ಹಾದಿ: ಶುಕ್ರವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ಪೇಸ್-ಹಿಂಗಿಸ್ ಜೋಡಿ, 7-5, 6-4 ನೇರ ಸೆಟ್ ಗಳಿಂದ ಚೈನೀಸ್ ತೈಪೇನ ಸು-ವೀ ಶೀಹೆ ಮತ್ತು ಉರುಗ್ವೆಯ ಪಬ್ಲೊ ಕ್ಯುವಾಸ್ ವಿರುದ್ಧ ಜಯಗಳಿಸಿತ್ತು. ಅಗ್ರಶ್ರೇಯಾಂಕಿತ ಜೋಡಿಯಾಗಿದ್ದ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್ ನ ಬ್ರುನೊ ಸೋರೆಸ್, 6-3, 2-6, 8-10 ಸೆಟ್ ಗಳಿಂದ ಫ್ರಾನ್ಸ್ ನ ಕ್ರಿಸ್ಟೀನಾ ಮ್ಲಾಡೆನೊವಿಕ್ ಮತ್ತು ಕೆನಡಾದ ಡೇನಿಯಲ್ ನೆಸ್ಟರ್ ಎದುರು ಸೋಲುಂಡಿದ್ದರು.

Leander Paes wins 15th Grand Slam title, lifts Mixed Doubles trophy at Oz Open

ಸೆರೆನಾ ಚಾಂಪಿಯನ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಸೋಲಿಸುವ ಮೂಲಕ ಅಮೆರಿಕದ ಅಗ್ರ ಶ್ರೇಯಾಂಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಕಿರೀಟ ತೊಟ್ಟಿದ್ದಾರೆ.

ಫೈನಲ್ ಪಂದ್ಯದಲ್ಲಿ ಸೆರೆನಾ, ಶರಫೋವಾ ವಿರುದ್ಧ 6-3, 7-6(7/5) ಸೆಟ್‌ಗಳ ಅಂತರದಲ್ಲಿ ಗೆಲವು ಸಾಧಿಸುವ ಮೂಲಕ ಸೆರೆನಾ 6ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ ಜೀವಮಾನದ 19ನೇ ಗ್ರ್ಯಾಂಡ್ ಸ್ಲಾಮ್ ಗೆದ್ದುಕೊಂಡರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+