ವಿಂಡೀಸ್ ವಿರುದ್ಧ ಟಿ20ಪಂದ್ಯಕ್ಕೆ ಮನೀಶ್ ಪಾಂಡೆ ಆಯ್ಕೆ
ಬೆಂಗಳೂರು, ಅ14: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ತಂಡಕ್ಕೆ ಕರ್ನಾಟಕದ ರಣಜಿ ಆಟಗಾರ ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಕೊನೆಯ ಎರಡು ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಕ್ಕೆ ಗುಜರಾತಿನ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಸೇರಿಕೊಳ್ಳಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಟಿ20 ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಮಂಗಳವಾರ ಪ್ರಕಟಿಸಿದೆ.
ಕಳೆದ ರಣಜಿ ಸೀಸನ್ ನಲ್ಲಿ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿ ಅದ್ಭುತ ಪ್ರದರ್ಶನ ನೀಡಿರುವ ಮನೀಶ್ ಪಾಂಡೆ ಅವರ ಆಯ್ಕೆ ಸೂಕ್ತವಾಗಿದೆ. ಕಿಂಗ್ಸ್ XI ಪಂಜಾಬ್ ವಿರುದ್ಧ ಆಡಿದ ಗುಜರಾತಿನ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಉಳಿದೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

ಅ.14ರಂದು ವಿಶಾಖಪಟ್ಟಣಂನಲ್ಲಿ ನಡೆಯಬೇಕಿದ್ದ ಪಂದ್ಯ ರದ್ದಾಗಿದೆ. ಹುಡ್ ಹುಡ್ ಚಂಡಮಾರುತ ದಾಳಿಗೆ ಸಿಲುಕಿ ವಿಶಾಖಪಟ್ಟಣಂನ ಸ್ಟೇಡಿಯಂ ಸಂಪೂರ್ಣ ಹಾಳಾಗಿದೆ. ಸದ್ಯಕ್ಕೆ ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ 1-1 ಸಮವಾಗಿದೆ. ನಾಲ್ಕನೇ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ಅ.17ರಂದು ನಡೆಯಲಿದೆ. ಕೊನೆಯ ಪಂದ್ಯ ಕೋಲ್ಕತ್ತಾದಲ್ಲಿ ಅ.20ರಂದು ನಡೆಯಲಿದೆ.ಏಕೈಕ ಟಿ20 ಪಂದ್ಯ ಕಟಕ್ ನಲ್ಲಿ ಅ.22 ರಂದು ನಡೆಯಲಿದೆ.
2 ಏಕದಿನ ಪಂದ್ಯಗಳಿಗೆ ತಂಡ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಮುರಳಿ ವಿಜಯ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್
ಟಿ20 ಪಂದ್ಯಕ್ಕೆ ತಂಡ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜ, ಸ್ಟುವರ್ಟ್ ಬಿನ್ನಿ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರಣ್ ಶರ್ಮ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಸಂಜು ಸ್ಯಾಮ್ಸನ್, ಉಮೇಶ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications