ಗಿಲ್ಕೆಸ್ ಜೊತೆ ಎಂಗೇಜ್ ಆದ ಟೆನಿಸ್ ತಾರೆ ಮರಿಯಾ ಶರಪೋವಾ

ಮಾಸ್ಕೋ: 5 ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಚಾಂಪಿಯನ್, ರಷ್ಯಾದ ಮರಿಯಾ ಶರಪೋವಾ ಜಂಟಿ ಜೀವನದತ್ತ ಮುಖಮಾಡಿದ್ದಾರೆ. ಬ್ರಿಟಿಷ್ ಬ್ಯುಸಿನೆಸ್‌ಮ್ಯಾನ್ ಅಲೆಕ್ಸಾಂಡರ್ ಗಿಲ್ಕೆಸ್ ಜೊತೆ ಶರಪೋವಾ ಗುರುವಾರ (ಡಿಸೆಂಬರ್ 17) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
6.2 ಅಡಿ ಎತ್ತರದ ಚೆಲುವೆ ಮರಿಯಾ ಶರಪೋವಾಗೀಗ 33ರ ಹರೆಯ. ಇದೇ ವರ್ಷ ಫೆಬ್ರವರಿಯಲ್ಲಿ ಶರಪೋವಾ ಅಂತಾರಾಷ್ಟ್ರೀಯ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ತಾನು ಲೆಕ್ಸಾಂಡರ್ ಗಿಲ್ಕೆಸ್ ಜೊತೆ ಎಂಗೇಜ್ ಆಗಿರುವ ಸಂಗತಿಯನ್ನು ಮರಿಯಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಲೆಕ್ಸಾಂಡರ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಮರಿಯಾ ಹಂಚಿಕೊಂಡಿದ್ದಾರೆ. 'ನಾವು ಮೊದಲು ಭೇಟಿಯಾದ ದಿನವೇ ನಾನು ಆತನಿಗೆ ಯೆಸ್ ಅಂದೆ. ಇದು ನಮ್ಮ ಸಣ್ಣ ರಹಸ್ಯವಾಗಿತ್ತು, ಅಲ್ಲವೇ?,' ಎಂದು ಶರಪೋವಾ ಇನ್‌ಸ್ಟಾ ಪೋಸ್ಟ್ ಜೊತೆ ಬರೆದುಕೊಂಡಿದ್ದಾರೆ.
ಅಲೆಕ್ಸಾಂಡರ್ ಅವರು ಪ್ಯಾಡಲ್8 ಎನ್ನುವ ಹರಾಜು ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಆ ಸಂಸ್ಥೆಯೀಗ ಬಹಳ ಯಶಸ್ಸು ಕಾಣುತ್ತಿದೆ. 2018ರಲ್ಲಿ ಅಲೆಕ್ಸಾಂಡರ್ ಮತ್ತು ಶರಪೋವಾ ಸಾರ್ವಜನಿಕವಾಗಿಯೇ ರೊಮಾನ್ಸ್ ಮಾಡಿ ತಮ್ಮ ನಡುವಿನ ಸಂಬಂಧವನ್ನು ಸಾರಿ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications