Miami Open: ಕನ್ನಡಿಗ ರೋಹನ್ ಬೋಪಣ್ಣ ಮುಡಿಗೆ ಮತ್ತೊಂದು ಗರಿ
ಭಾರತದ ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಮಿಯಾಮಿ ಓಪನ್ 2024 ರ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಬೋಪಣ್ಣ ತಮ್ಮ ಇಳಿಯ ವಯಸ್ಸಿನಲ್ಲಿ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದು, ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ಈ ಮೂಲಕ ಎಟಿಪಿ ಮಾಸ್ಟರ್ಸ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. 2023ರಲ್ಲಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಬೋಪಣ್ಣ ಸುಧಾರಿಸಿಕೊಂಡರು.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಈ ಇಂಡೋ-ಆಸ್ಟ್ರೇಲಿಯನ್ ಜೋಡಿ 6-7, 6-3, 10-16 ಅಂತರದಲ್ಲಿ ಜಯ ಸಾಧಿಸಿತು. ಶನಿವಾರ ನಡೆದ ಫೈನಲ್‌ನಲ್ಲಿ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್ ಜೋಡಿ ಕ್ರೊವೇಷಿಯಾದ ಇವಾನ್ ಡೋಡಿಕ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ಜೋಡಿಯನ್ನು ಸೋಲಿಸಿತು.

ಆರನೇ ಎಟಿಪಿ ಮಾಸ್ಟರ್ಸ್
ಬೋಪಣ್ಣ 2011 ರಲ್ಲಿ ಪಾಕಿಸ್ತಾನದ ಎಸ್ಸಾಮ್-ಯು-ಹಕ್-ಖುರೇಷಿ ಅವರೊಂದಿಗೆ ಎಟಿಪಿ ಮಾಸ್ಟರ್ಸ್ ಗೆದ್ದಿದ್ದರು. 2012 ರಲ್ಲಿ ಪ್ಯಾರಿಸ್, 2015 ರಲ್ಲಿ ಮ್ಯಾಡ್ರಿಡ್, 2017 ರಲ್ಲಿ ಮಾಂಟೆ ಕಾರ್ಲೋ ಮತ್ತು 2023 ರಲ್ಲಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದು ಅವರ ಆರನೇ ಎಟಿಪಿ ಮಾಸ್ಟರ್ಸ್ ಪ್ರಶಸ್ತಿ ಆಗಿದೆ.
ಎಟಿಪಿ ಮಾಸ್ಟರ್ಸ್ ಎಂದರೇನು?
2009 ರಿಂದ ATP ಮಾಸ್ಟರ್ಸ್ 1000 ಪಂದ್ಯಾವಳಿಗಳು ಎಂದು ಕರೆಯಲ್ಪಡುವ ATP ಮಾಸ್ಟರ್ಸ್ ಒಂಬತ್ತು ಟೆನಿಸ್ ಪಂದ್ಯಾವಳಿಗಳ ಸರಣಿ. ಗ್ರ್ಯಾಂಡ್ ಸ್ಲ್ಯಾಮ್ ಬಿಟ್ಟರೆ ಅತಿ ಹೆಚ್ಚು ಅಂಕಗಳನ್ನು ನೀಡುವ ಟೆನಿಸ್ ಟೂರ್ನಿ ಇದಾಗಿದೆ. ಗ್ರ್ಯಾಂಡ್ ಸ್ಲ್ಯಾಮ್ ವಿಜೇತರಿಗೆ 2000 ಅಂಕಗಳನ್ನು ನೀಡಿದರೆ, ಮಾಸ್ಟರ್ಸ್ ಗೆದ್ದರೆ 1000 ಅಂಕ ನೀಡಲಾಗುತ್ತದೆ. ಎಟಿಪಿ ಮಾಸ್ಟರ್ಸ್ 1000 ಗ್ರ್ಯಾಂಡ್ ಸ್ಲಾಮ್‌ಗಳ ನಂತರ ಟೆನಿಸ್‌ನಲ್ಲಿ ಅಗ್ರ ಶ್ರೇಣಿಯ ಪಂದ್ಯಾವಳಿ.
ಅಲ್ಲದೆ ಈ ವರ್ಷ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದರು
ರೋಹನ್ ಬೋಪಣ್ಣ ಅವರು ತಮ್ಮ ಆಸ್ಟ್ರೇಲಿಯಾದ ಪಾಲುದಾರ ಮ್ಯಾಥ್ಯೂ ಎಬ್ಡನ್ ಅವರೊಂದಿಗೆ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದು ಬೋಪಣ್ಣ ಅವರು ಗೆದ್ದ ಮೊದಲ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications