ದಾಖಲೆ ಬೆನ್ನತ್ತಿದ್ದ ಸೆರೆನಾ ವಿಲಿಯಮ್ಸ್‌ಗೆ ಸೋಲಿನ ರುಚಿ ತೋರಿಸಿದ ನವೊಮಿ ಒಸಕಾ

24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ವಿಶ್ವದಾಖಲೆಯನ್ನು ಸರಿಗಟ್ಟುವ ಹುಮ್ಮಸ್ಸಿನಲ್ಲಿದ್ದ ಅಮೆರಿಕಾದ ಟೆನ್ನಿಸ್ ಆಟಗಾರ್ತಿ ಸೆರಿನಾ ವಿಲಿಯಮ್ಸನ್ ಆಸ್ಟ್ರೇಲಿಯನ್ ಓಪನ್‌ನ ಫೈನಲ್ ಹಂತಕ್ಕೇರುವ ಮುನ್ನವೇ ಸೋಲು ಕಂಡಿದ್ದಾರೆ. ಸೆಮಿ ಫೈನಲ್‌ನಲ್ಲಿ ಜಪಾನ್‌ನ ಆಟಗಾರ್ತಿ ನವೋಮಿ ಒಸಾಕಾ ವಿರುದ್ಧ ನಡೆದ ಹಣಾಹಣಿಯಲ್ಲಿ ಅಮೆರಿಕಾದ ಶ್ರೇಷ್ಠ ಆಟಗಾರ್ತಿ 6-3, 6-4 ಅಂತರದಿಂದ ಸೋತು ಹೊರಬಿದ್ದರು.
ಈ ಗೆಲುವಿನ ಮೂಲಕ ನವೋಮಿ ಒಸಾಕ ತಮ್ಮ ಗೆಲುವಿನ ಸರಪಳಿಯನ್ನು 20ನೇ ಪಂದ್ಯಕ್ಕೆ ಏರಿಸಿಕೊಂಡಿದ್ದಾರೆ. ಐದು ಅಂಕಗಳ ಪಂದ್ಯದಲ್ಲಿ ಆರಂಭದಲ್ಲಿ ಸೆರೆನಾ ಮುನ್ನಡೆಯನ್ನು ಸಾಧಿಸಿದ್ದರು, ಆದರೆ ನಂತರ ತನ್ನ ಹಿಡಿತಕ್ಕೆ ಪಂದ್ಯವನ್ನು ತೆಗೆದುಕೊಳ್ಳುವಲ್ಲಿ ಒಸಕಾ ಯಶಸ್ವಿಯಾದರು.
39ರ ಹರೆಯದ ಅಮೆರಿಕನ್ ಆಟಗಾರ್ತಿ ಈ ಸೋಲಿನ ಬಳಿಕ ಭಾವುಕರಾಗಿದ್ದಾರೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದು ನಿಮ್ಮ ಕೆಟ್ಟ ದಿನವಾಗಿತ್ತಾ ಎಂಬ ಪ್ರಶ್ನೆಗೆ ದುಃಖದಿಂದಲೇ ಪ್ರತಿಕ್ರಿತಿಸಿ ಬಳಿಕ ಹೊರ ನಡೆದರು.
"ನನಗೆ ಸಾಕಷ್ಟು ಅವಕಾಶಗಳು ಇದ್ದವು,.. ಇದು ಕೇವಲ... ನಾನು ತುಂಬಾ ತಪ್ಪುಗಳನ್ನು ಎಸಗಿದೆ ಮತ್ತು ಅದು ತುಂಬಾ ಸುಲಭದ ತಪ್ಪುಗಳು.. ಅವೆಲ್ಲವೂ ಸುಲಭ ಸುಲಭವಾದ ತಪ್ಪುಗಳು.." ಎಂದಿದ್ದಾರೆ ಸೆರೆನಾ ವಿಲಿಯಮ್ಸ್. ನನಗೇನು ತಿಳಿಯುತ್ತಿಲ್ಲ. ನಾನು ಮುಕ್ತಾಯಗೊಳಿಸುತ್ತೇನೆ" ಎಂದು ಅಂತಿಮವಾಗಿ ಕಣ್ಣೀರಿಡುತ್ತಾ ಹೊರನಡೆದರು.
ಸೆರೆನಾ 2017ರಲ್ಲಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಗೆಲ್ಲುವ ಮೂಲಕ ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ 23ನೇ ಬಾರಿಗೆ ಚಾಂಪಿಯನ್ ಎನಿಸಿದ್ದರು. ಆದರೆ ಮಾರ್ಗರೇಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಗಿಂತ ಒಂದು ಪ್ರಶಸ್ತಿ ಹಿಂದುಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications