Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Tennis: ತಾಯಿಯಾದ ಬಳಿಕ ಟೆನಿಸ್ ಅಂಗಳಕ್ಕೆ ಭರ್ಜರಿ ಕಮ್‌ ಬ್ಯಾಕ್ ಮಾಡಿದ ನವೋಮಿ ಒಸಾಕಾ

ಜಪಾನ್‌ನ ನವೋಮಿ ಒಸಾಕಾ ತಾಯಿಯಾದ ನಂತರ ಟೆನಿಸ್‌ ಕೋರ್ಟ್‌ಗೆ ಮರಳಿದ್ದರೆ. ಸೋಮವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆದ್ದರು.

ಆಸ್ಟ್ರೇಲಿಯನ್ ಓಪನ್, ಋತುವಿನ ಮೊದಲ ಗ್ರ್ಯಾಂಡ್ ಸ್ಲ್ಯಾಮ್‌ಗಾಗಿ ತಯಾರಿ ಮಾಡಲು, ಆಟಗಾರರು ಜನವರಿ 15 ರಂದು ಪ್ರಾರಂಭವಾಗುವ ಹ್ಯಾಪಿ ಸ್ಲಾಮ್‌ಗಿಂತ ಮುಂಚಿತವಾಗಿ ಫಾರ್ಮ್ ಪಡೆಯಲು ಬ್ರಿಸ್ಬೇನ್ ಇಂಟರ್‌ನ್ಯಾಶನಲ್‌ನಲ್ಲಿ ಭಾಗವಹಿಸುತ್ತಾರೆ. ಜಪಾನ್ ನ ನವೋಮಿ ಒಸಾಕಾ ಕೂಡ ಬ್ರಿಸ್ಬೇನ್ ನ ಟೆನಿಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಟೂರ್ನಿ ಅವರಿಗೆ ವಿಶೇಷವಾಗಿದೆ.

Naomi Osakas Inspiring Comeback to Tennis After Becoming a Mother

ಒಸಾಕಾ ಬ್ರಿಸ್ಬೇನ್ ಇಂಟರ್‌ನ್ಯಾಶನಲ್‌ನನಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಒಸಾಕಾ 15 ತಿಂಗಳ ನಂತರ ಅಂಗಳಕ್ಕೆ ಎಂಟ್ರಿ ನೀಡಿ ಸತತ ಸೆಟ್‌ಗಳಲ್ಲಿ ಗೆದ್ದರು. ಅವರು ಜರ್ಮನಿಯ ತಮಾರಾ ಕೊರ್ಪಾಶ್ ಅವರನ್ನು 6-3, 7-6 ಸೆಟ್‌ಗಳಿಂದ ಸೋಲಿಸಿದರು. ಇದೀಗ ಒಸಾಕಾ 16ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ.

ಒಸಾಕಾ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದಿದ್ದರು. ಅವರು ಎರಡನೇ ಸೆಟ್‌ನಲ್ಲಿ 5-3 ರಲ್ಲಿ ಜರ್ಮನ್ ಆಟಗಾರ್ತಿ ವಿರುದ್ಧ ಸರ್ವ್ ಕಳೆದುಕೊಂಡರು.

ಸೆಟ್ ಟೈಬ್ರೇಕರ್‌ಗೆ ವಿಸ್ತರ ಪಡೆಯಿತು. ಇದರಲ್ಲಿ ಒಸಾಕಾ 7-6 (9) ಗೆದ್ದು ಪಂದ್ಯವನ್ನು ಗೆದ್ದರು. ಒಸಾಕಾ 2021 ರಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದರು. ನಂತರ ಮಾನಸಿಕ ಆರೋಗ್ಯದ ಕಾರಣದಿಂದ ಹಲವಾರು ಬಾರಿ ವಿರಾಮ ತೆಗೆದುಕೊಂಡರು. ಕಳೆದ ವರ್ಷ, ಅವರು ಗರ್ಭಾವಸ್ಥೆಯ ಕಾರಣ ಕೋರ್ಟ್‌ನಿಂದ ದೂರವಿದ್ದರು.

Naomi Osakas Inspiring Comeback to Tennis After Becoming a Mother

ಕಳೆದ ವರ್ಷ ಜುಲೈನಲ್ಲಿ ಒಸಾಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು ತಾಯಿಯಾದ ನಂತರ, ಅವರು ಹೆಚ್ಚು ಮುಕ್ತ ಮನಸ್ಸು ಮತ್ತು ಬಲಿಷ್ಠಳಾಗಲು ಪ್ರಾರಂಭಿಸಿದಳು ಎಂದು ಒಸಾಕಾ ಹೇಳಿದರು.

ಮೊದಲು ನಾನು ಸುತ್ತಮುತ್ತಲಿನ ಪರಿಸರದಿಂದ ದೂರವಿರಲು ಹೆಡ್‌ಫೋನ್‌ಗಳನ್ನು ಧರಿಸುತ್ತಿದ್ದೆ. ಈಗ ನಾನು ಹಾಗೆ ಮಾಡುವುದನ್ನು ನಿಲ್ಲಿಸಿದೆ. ನಾನು ಮೊದಲು ಇತರ ಆಟಗಾರರೊಂದಿಗೆ ಸಂವಹನ ನಡೆಸುತ್ತಿರಲಿಲ್ಲ. ನನ್ನ ಸುತ್ತಲೂ ಒಂದು ರೀತಿಯ ಗೋಡೆ ಕಟ್ಟಿಕೊಂಡಿದ್ದೆ. ಆದರೆ ಈಗ ನಾನು ಜನರೊಂದಿಗೆ ಮಾತನಾಡಲು ಸಮಯ ಮೀಸಲು ಇಡುತ್ತೇನೆ ಎಂದಿದ್ದಾರೆ.

ವಿಶ್ವದ 17ನೇ ಶ್ರೇಯಾಂಕದ ಟೆನಿಸ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವುದಿಲ್ಲ. ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಜನವರಿ 14 ರಿಂದ ಪ್ರಾರಂಭವಾಗಲಿದೆ. ವರ್ಷದ ಮೊದಲ ದಿನದಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಪೆಟ್ರಾ ಅವರು ತಾವು ಮೊದಲ ಮಗುವಿಗೆ ತಾಯಿಯಾಗಲಿರುವುದಾಗಿ ತಿಳಿಸಿದ್ದಾರೆ. ಪೆಟ್ರಾ ಅಕ್ಟೋಬರ್‌ನಲ್ಲಿ ಚೀನಾ ಓಪನ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದ್ದರು.

Story first published: Tuesday, January 2, 2024, 9:18 [IST]
Other articles published on Jan 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+