National Games: ಟೆನ್ನಿಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕದ ಡಬಲ್ಸ್, ಮಿಶ್ರ ಡಬಲ್ಸ್ ತಂಡ
ಬೆಂಗಳೂರು, ನವೆಂಬರ್ 2: ಗೋವಾದ ಫಟೋರ್ಡಾದ ಬಹುಪಯೋಗಿ ಮೈದಾನದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನ್ನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪುರುಷರ ಡಬಲ್ಸ್ ತಂಡ ಮತ್ತು ಮಿಶ್ರ ಡಬಲ್ಸ್ ತಂಡ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್ ಹಂತ ಪ್ರವೇಶಿಸಿದೆ.
ಮೊದಲಿಗೆ ಎಸ್‌ಡಿ ಪ್ರಜ್ವಲ್ ದೇವ್ ಮತ್ತು ಆದಿಲ್ ಕಲ್ಯಾಣಪುರ ಜೋಡಿಯು ಗೋವಾದ ಜೋಡಿ ಕ್ರಿಸ್ಟೋಫರ್ ಮಾರ್ಕ್ವಿಸ್ ಮತ್ತು ತೇಜಸ್ ಶೆವ್ಡೆ ಅವರನ್ನು 6-2, 6-1 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

ಆ ಬಳಿಕ, ಪ್ರಜ್ವಲ್ ದೇವ್ ಮತ್ತು ಶರ್ಮದಾ ಬಾಲು ಮಿಶ್ರ ಡಬಲ್ಸ್ ಜೋಡಿಯು ಭಾರತದ ಪ್ರಮುಖ ಮಹಿಳಾ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಮತ್ತು ಧ್ರುವ್ ಹಿರ್ಪಾರಾ ಅವರ ಜೋಡಿಯನ್ನು 6-4, 4-6, 10-8 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ ಬುಧವಾರ ನಡೆದ ತಂಡದ ಸ್ಪರ್ಧೆಯ ಪೈಪೋಟಿಯುತ ಫೈನಲ್‌ನಲ್ಲಿ ಕರ್ನಾಟಕ ತಂಡವು 2-1 ಅಂತರದಿಂದ ನೆರೆಯ ತಮಿಳುನಾಡು ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications