ಟೆನಿಸ್: ಫೆಡರರ್ ಹೊರಗಟ್ಟಿದ ಮಿಲ್ಮನ್ ಗೆ ಸೋಲುಣಿಸಿದ ಜೊಕೋವಿಕ್

ನ್ಯೂಯಾರ್ಕ್, ಸೆಪ್ಟೆಂಬರ್ 6: ವಿಶ್ವ 2ನೇ ಶ್ರೇಯಾಂಕಿತ ರೋಜರ್ ಫೆಡರರ್ ಗೆ ಆಗದ್ದನ್ನು ವಿಶ್ವ 6ನೇ ಶ್ರೇಯಾಂಕಿತ ನೊವಾಕ್ ಜೊಕೋವಿಕ್ ಮಾಡಿದ್ದಾರೆ. ಪ್ರಿ-ಕಾರ್ಟರ್ ಫೆನಲ್ ನಲ್ಲಿ ಫೆಡರರ್ ಅವರನ್ನು ಟೂರ್ನಿಯಿಂದ ಹೊರಗಟ್ಟಿದ್ದ ಜಾನ್ ಮಿಲ್ಮನ್ ಅವರನ್ನು ಜೊಕೋವಿಕ್ ಸೋಲಿಸಿ ಯೂಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೆಪ್ಟೆಂಬರ್ 6ರ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಜೊಕೋವಿಕ್ ಅವರು ಆಸ್ಟ್ರೇಲಿಯಾ ಆಟಗಾರ ವಿಲ್ಮನ್ ಅವರನ್ನು 6-3, 6-4, 6-4ರಿಂದ ಸೋಲಿಸುವ ಮೂಲಕ ಟೂರ್ನಿಯಿಂದ ಹೊರಗಟ್ಟಿದರು.
ಜುಲೈ ತಿಂಗಳಿನಲ್ಲಿ 13ನೇ ವಿಂಬಲ್ಡನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ನೊವಾಕ್ ಫ್ಲಶಿಂಗ್ ಮೆಡೋಸ್ (ಯೂಎಸ್ ಓಪನ್) ಗೆದ್ದುಕೊಂಡು 14ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ತನ್ನದಾಗಿಸಿಕೊಳ್ಳುವತ್ತ ಕಣ್ಣಿಟ್ಟಿದ್ದಾರೆ. ಸೆಮಿ ಫೈನಲ್ ನಲ್ಲಿ ಜೊಕೊವಿಕ್ ಜಪಾನ್ ಆಟಗಾರ ಕೀ ನಿಶಿಕೋರಿ ಸವಾಲು ಸ್ವೀಕರಿಸಲಿದ್ದಾರೆ.
ವಿಶ್ವ 55ನೇ ಶ್ರೇಯಾಂಕಿತ ಮಿಲ್ಮನ್ ಅವರು ಬುಧವಾರ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಬಲಾಡ್ಯ ಫೆಡರರ್ ಅವರನ್ನು ಯೂಎಸ್ ಓಪನ್ ಟೂರ್ನಿಯಿಂದ ಹೊರ ಕಳುಹಿಸಿದ್ದರು. 50ರ ಕೆಳಗಿನ ಶ್ರೇಯಾಂಕಿತ ಆಟಗಾರನೆದುರು ಫೆಡರರ್ ಸೋತಿದ್ದು ಇದೇ ಮೊದಲಸಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications