ಆ್ಯಂಡರ್ಸನ್ ಮಣಿಸಿದ ಜೊಕೊವಿಕ್ ಗೆ 4ನೇ 'ವಿಂಬಲ್ಡನ್ ' ಕಿರೀಟ


ಲಂಡನ್, ಜುಲೈ 15: ಭಾನುವಾರ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ನೊವಾಕ್ ಜೊಕೊವಿಕ್ ಪ್ರತಿಷ್ಠಿತ 4ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಸರ್ಬಿಯನ್ ಬಲಾಡ್ಯ ಜೊಕೊವಿಕ್ ಅವರು ಸೌತಾಫ್ರಿಕಾ ಆಟಗಾರ ಕೆವಿನ್ ವಿರುದ್ಧ 6-2, 6-2, 6-7(7-3) ಅಂತರದ ಗೆಲುವು ದಾಖಲಿಸಿದರು. ಪಂದ್ಯಾರಂಭದಿಂದಲೇ ಜೊಕೊವಿಕ್ ಉತ್ತಮ ಆಟ ಪ್ರದರ್ಶಿಸುತ್ತ ಎದುರಾಳಿಯನ್ನು ಹಿಮ್ಮೆಟ್ಟಿಸುತ್ತಾ ಸಾಗಿದರು. ಕೆವಿನ್ ತಕ್ಕ ಮಟ್ಟಿನ ಹೋರಾಟ ನಡೆಸಿದರಾದರೂ ಅನುಭವಿ ಆಟಗಾರನ ಮುಂದೆ ಸೋಲಬೇಕಾಯಿತು.
ವಿಶ್ವ ನಂ. 12ನೇ ಆಟಗಾರ ನೊವಾಕ್ ಈ ಪಂದ್ಯದಲ್ಲಿ ಶ್ರೇಷ್ಠ ಆಟ ಪ್ರದರ್ಶಿಸಿದರು. ಮೊದಲ ಸೆಟ್ ನಲ್ಲಿ 8ನೇ ಶ್ರೇಯಾಂಕಿತ ಕೆವಿನ್ ಗೆ ಎರಡು ಅಂಕಗಳನ್ನು ನೀಡಿದರು. ದ್ವಿತೀಯ ಸೆಟ್ ನಲ್ಲೂ ಎರಡು ಅಂಕವನ್ನಷ್ಟೇ ನೀಡಿದರು. ಮೂರನೇ ಸೆಟ್ ನಲ್ಲಿ ಕೆವಿನ ಅವರು ಜೊಕೊವಿಕ್ ಗೆ ಪ್ರಬಲ ಪೈಪೋಟಿ ನೀಡಿದರಾದರೂ ಜೊಕೊವಿಕ್ ಜಯ ತನ್ನದಾಗಿಸಿದರು.
ಈವರೆಗೆ 10 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೊವಿಕ್ ಈ ಗೆಲುವಿನೊಂದಿಗೆ 13ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ತನ್ನಾದಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications