ಸುದೀರ್ಘ ಕಾಳಗದಲ್ಲಿ ಫೆಡರರ್ ಮಣಿಸಿ ವಿಂಬಲ್ಡನ್ ಜಯಿಸಿದ ಜೊಕೋವಿಕ್

ಲಂಡನ್, ಜುಲೈ 15: ರೋಜರ್ ಫೆಡರರ್‌ಗಿಂತ ತಾನು ಬಲಶಾಲಿಯೆಂದು ನೊವಾಕ್ ಜೊಕೋವಿಕ್ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಭಾನುವಾರ (ಜುಲೈ 14) ನಡೆದ ವಿಂಬಲ್ಡನ್ ಫೈನಲ್ ರೋಚಕ ಪಂದ್ಯದಲ್ಲಿ ಸ್ವಿಸ್ ಮಾಸ್ಟರ್ ಫೆಡರರ್ ಮಣಿಸಿ ಸರ್ಬಿಯಾ ಬಲಿಷ್ಠ ಜೊಕೋವಿಕ್ 5ನೇ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದಾರೆ.
ಟೆನಿಸ್ ಇತಿಹಾಸದಲ್ಲಿ ಸುದೀರ್ಘ ಕಾಳವಾಗಿ ಗುರುತಿಸಿಕೊಂಡ ಇಬ್ಬರ ಕದನ 5 ಸೆಟ್‌ಗಳವರೆಗೆ ಮುಂದುವರೆಯಿತು. ಅಂತಿಮವಾಗಿ ಟೈಬ್ರೇಕರ್ ಮೂಲಕ ಜೊಕೋವಿಕ್ ಮೇಲುಗೈ ಸಾಧಿಸಿದರು. ಫೆಡರರ್ ಅವರನ್ನು ಜೊಕೋವಿಕ್ 7-6(5) 1-6 7-6(4) 4-6 13-12(3)ರ ಅಂತರದಿಂದ ಸೋಲಿಸಿ ವಿಂಬಲ್ಡನ್ ಚಾಂಪಿಯನ್ ಪಟ್ಟ ಉಳಿಸಿಕೊಂಡರು.
ಈ ಜಯದೊಂದಿಗೆ ಜೊಕೋವಿಕ್ 16ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನ ಸೋಲು ಫೆಡರರ್ ಅವರ 9ನೇ ವಿಂಬಲ್ಡನ್ ಆಸೆಗೆ ತಣ್ಣೀರೆರಚಿದೆ. ಅಲ್ಲದೆ 37ನೇ ಹರೆಯದ ಫೆಡರರ್ ಈ ಪಂದ್ಯದಲ್ಲಿ ಜಯ ದಾಖಲಿಸಿದ್ದರೆ, ಟೆನಿಸ್ ವೃತ್ತಿ ಜೀವನದಲ್ಲಿ ವಿಂಬಲ್ಡನ್ ಜಯಿಸಿದ ಅತೀ ಹಿರಿಯ ಆಟಗಾರನಾಗಿ ಗುರುತಿಸಿಕೊಳ್ಳುವುದರಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications