ಕೊರೊನಾ ಪರಿಹಾರಕ್ಕೆ 40,000 ಯೂರೋಸ್ ದೇಣಿಗೆ ನೀಡಿದ ಜೊಕೋವಿಕ್

ಬೆಲ್ಗ್ರೇಡ್, ಜುಲೈ 2: ಕೊರೊನಾವೈರಸ್ ಪೀಡಿತ ಸರ್ಬಿಯಾ ನಗರಕ್ಕೆ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ 40,000 ಯೂರೋಸ್ (ಸುಮಾರು 33,79,415 ರೂ. ) ಅನ್ನು ದೇಣಿಗೆಯಾಗಿ ನೀಡಿದ್ದಾರೆ. ಸ್ಥಳೀಯ ಮಾಧ್ಯಮಗಳು ಬುಧವಾರ (ಜುಲೈ 1) ಇದನ್ನು ವರದಿ ಮಾಡಿವೆ.
33ರ ಹರೆಯದ ಜೊಕೋವಿಕ್, ಸರ್ಬಿಯಾದ ನೊವಿ ಪಝರ್ ನಗರಕ್ಕೆ ಕೊರೊನಾವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಿದ್ದಾರೆ ಎಂದು ಅಲ್ಲಿನ 'ಸ್ಪೋರ್ಟ್ಸ್ ಕ್ಲಬ್ ಟಿವಿ' ಸ್ಪೋರ್ಟ್ಸ್ ಚಾನೆಲ್ ವರದಿ ಮಾಡಿದೆ. ಅಂದ್ಹಾಗೆ, ತಾನೇ ಆಯೋಜಿಸಿದ್ದ ಪ್ರದರ್ಶನ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೋವಿಗ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು.
ಉಸಿರಾಟದ ತೊಂದರೆಯನ್ನುಂಟುಮಾಡುವ ಈ ಕೊರೊನಾವೈರಸ್ ಸೋಂಕು ಆತಂಕಕಾರಿಯಾಗಿ ಹಬ್ಬುತ್ತಿದ್ದರಿಂದ ನೊವಿ ಪಝರ್ ನಗರವನ್ನು ತುರ್ತು ಪರಿಸ್ಥಿತಿಯ ಕೇಂದ್ರವೆಂದು ಜೂನ್ ತಿಂಗಳಾಂತ್ಯದಲ್ಲಿ ಘೋಷಿಸಲಾಗಿತ್ತು. ತಿಂಗಳ ಹಿಂದೆ ಸರ್ಬಿಯಾದಲ್ಲಿ ದಿನಕ್ಕೆ 50ರಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಈಗ ದಿನಕ್ಕೆ 200ಕ್ಕೆ ಏರಿಕೆ ಕಂಡಿದೆ.
ಬೆಲ್ಗ್ರೇಡ್‌ನಲ್ಲಿ ನೊವಾಕ್ ಜೊಕೋವಿಕ್ ಅವರು ಆ್ಯಂಡ್ರಿಯಾ ಎನ್ನುವ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಸರ್ಬಿಯಾವನ್ನು ಕೊರೊನಾದಿಂದ ಪಾರು ಮಾಡಲು ಟೂರ್ನಿಯ ಮೂಲಕ ದೇಣಿಗೆ ಸಂಗ್ರಹಿಸುವುದು ಜೊಕೋವಿಕ್ ಯೋಜನೆಯಾಗಿತ್ತು. ಆದರೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೊವಿಕ್‌ಗೂ ಸೇರಿ ಕೆಲ ಪ್ರಮುಖರಿಗೆ ಸೋಂಕು ತಗುಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications