ಹೀಗೂ ಉಂಟು: 4ನೇ ವಿಂಬಲ್ಡನ್ ಗೆದ್ದ ಖುಷಿಗೆ ಹುಲ್ಲುತಿಂದ ಜೊಕೊವಿಕ್!


ಲಂಡನ್, ಜುಲೈ 16: ಮನಸ್ಸಿಗೆ ತುಂಬಾ ಖುಷಿಯಾದಾಗ ಹೀಗಾಗೋದಿದೆ. ಅದರಲ್ಲೂ ಕ್ರೀಡಾಪಟುಗಳು ಒಮ್ಮೊಮ್ಮೆ 'ಚಾಂಪಿಯನ್' ಸಂಭ್ರಮವನ್ನು ವ್ಯಕ್ತಪಡಿಸುವ ರೀತಿ ಇನ್ನೊಬ್ಬರಿಗೆ ಅಚ್ಚರಿ ಹುಟ್ಟಿಸುತ್ತೆ. ಈಸಾರಿ 2018ರ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಹುಲ್ಲು ತಿನ್ನುವ ಮೂಲಕ ಬೆರಗು ಮೂಡಿಸಿದ್ದಾರೆ.
ಭಾನುವಾರ (ಜು. 15) ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 10 ಆಟಗಾರ ಸರ್ಬಿಯಾದ ಜೊಕೊವಿಕ್ ಅವರು 5ನೇ ಶ್ರೇಯಾಂಕಿತ ಸೌತಾಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು 6-2, 6-2, 7-6(7/3) ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿದ್ದರು.
2011, 2014 ಮತ್ತು 2015ರ ವಿಂಬಲ್ಡನ್ ಜಯಿಸಿದ್ದ ಜೊಕೊವಿಕ್ ಗೆ ಈ ಬಾರಿಯ ವಿಂಬಲ್ಡನ್ ನಾಲ್ಕನೆಯದು. ಈ ಹಿಂದೆ 12 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ ನೊವಾಕ್ ಗೆ ನೆನ್ನೆಯ (ಜು. 15) ಪಂದ್ಯ 13ನೇ ಗ್ರ್ಯಾಂಡ್ ಸ್ಲ್ಯಾಮ್ ತಂದುಕೊಟ್ಟಿತ್ತು. ಇದೇ ಖುಷಿಗೆ ಜೊಕೊವಿಕ್ ಇಂಗ್ಲೆಂಡ್ ನ ಸೆಂಟರ್ ಕೋರ್ಟ್ ಮೈದಾನದಲ್ಲಿದ್ದ ಹುಲ್ಲು ತಿಂದಿದ್ದಾರೆ.
ಆಟದ ಪ್ರಖರತೆಯನ್ನು ಕಳೆದುಕೊಂಡು ರ್ಯಾಂಕಿಂಗ್ ನ ಕೆಳಸ್ಥರಕ್ಕೆ ಕುಸಿದಿದ್ದ ನೊವಾಕ್, ಇತ್ತೀಚೆಗಷ್ಟೇ ಮತ್ತೆ ಫಾರ್ಮ್ ಗೆ ಬರುತ್ತಿದ್ದಾರೆ. ಜುಲೈ 15ರ ಫೈನಲ್ ಪಂದ್ಯ ಜೊಕೊವಿಕ್ ಅವರನ್ನು ರ್ಯಾಂಕಿಂಗ್ ನಲ್ಲೂ ಮೇಲೆತ್ತಿತ್ತು. ಇವೆಲ್ಲವೂ ಸರ್ಬಿಯನ್ ಆಟಗಾರನ ಹುಚ್ಚು ಖುಷಿಗೆ ಕಾರಣ.
31ರ ಹರೆಯದ ಜೊಕೊವಿಕ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಹುಲ್ಲು ನಿಜಕ್ಕೂ ರುಚಿಯಾಗಿತ್ತು. ಈ ವರ್ಷ ಎರಡು (ವಿಂಬಲ್ಡನ್+ಗ್ರ್ಯಾಂಡ್ ಸ್ಲ್ಯಾಮ್) ಸಂಭ್ರಮ ನನ್ನ ಪಾಲಿನದ್ದು. ಹಾಗಾಗಿ ನನಗೆ ನಾನೇ ಸಂಭ್ರಮಿಸಿದ್ದೇನೆ' ಎಂದಿದ್ದಾರೆ. ಈ ಹಿಂದೆ ಪಂದ್ಯ ಗೆದ್ದಾಗ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರೂ ತಮ್ಮ ನೆಚ್ಚಿನ ಹಸುವನ್ನು ಮೈದಾನಕ್ಕೇ ಕರೆಸಿ ಹಾಲುಕರೆದು ಕುಡಿದು ಸಂಭ್ರಮಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications