Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಪ್ರಾಸ್ ಹೆಸರಿನಲ್ಲಿದ್ದ ದಾಖಲೆ ಸರಿದೂಗಿಸಿದ ನೊವಾಕ್ ಜೊಕೋವಿಕ್

Novak Djokovic equals Pete Sampras year-end World No. 1 record

ಪ್ಯಾರಿಸ್: ತನ್ನ ಬಾಲ್ಯ ದಿನಗಳ ಹೀರೋ ಪೀಟ್ ಸಂಪ್ರಾಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ, ವಿಶ್ವ ನಂ.1 ಸ್ಥಾನಿ ನೊವಾಕ್ ಜೊಕೋವಿಕ್ ಸರಿದೂಗಿಸಿಕೊಂಡಿದ್ದಾರೆ. ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ ಕೊನೆಗೊಳಿಸಿದ ದಾಖಲೆಗೆ ಜೊಕೋವಿಕ್ ಕಾರಣರಾಗಿದ್ದಾರೆ.

ವರ್ಷಾಂತ್ಯವನ್ನು ನಂ.1 ಸ್ಥಾನದಲ್ಲಿ 6 ಸಾರಿ ಕೊನೆಗೊಳಿಸಿದ ದಾಖಲೆ ಅಮೆರಿಕಾದ ಟೆನಿಸ್ ದಂತಕತೆ ಪೀಟ್ ಸಂಪ್ರಾಸ್ ಹೆಸರಿನಲ್ಲಿತ್ತು. ಈಗ ಜೊಕೋವಿಕ್‌ ಕೂಡ ಈ ವರ್ಷವೂ ಸೇರಿ ಒಟ್ಟು 6 ಸಾರಿ ನಂ.1 ಸ್ಥಾನದಲ್ಲಿ ವರ್ಷವನ್ನು ಕೊನೆಗೊಳಿಸುವುದರಲ್ಲಿದ್ದಾರೆ.

33ರ ಹರೆಯದ ಜೊಕೋವಿಕ್, ನಂ.1 ಸ್ಥಾನದಲ್ಲಿ 2020ರ ವರ್ಷ ಕೊನೆಗೊಳಿಸೋದು ಖಾತರಿಯಾಗಿದೆ. ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್‌ ಜೊಕೋವಿಕ್ ಅವರನ್ನು ನಂ.1 ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯಿತ್ತು. ಆದರೆ ಮುಂದಿನ ವಾರ ನಡೆಯಲಿರುವ ಸೋಫಿಯಾ ಸ್ಪರ್ಧೆಯಿಂದ ನಡಾಲ್ ದೂರ ಉಳಿದಿದ್ದಾರೆ.

ನವೆಂಬರ್ 7ರಿಂದ 14ರ ವರೆಗೆ ನಡೆಯಲಿರುವ ಎಟಿಪಿ ಸೋಫಿಯಾ ಓಪನ್ ಟೂರ್ನಿಯಲ್ಲಿ ನಡಾಲ್ ಭಾಗವಹಿಸುತ್ತಿಲ್ಲವಾದ್ದರಿಂದ ವಿಶ್ವ ನಂ. 1 ಸ್ಥಾನಕ್ಕೆ ಜೊಕೋವಿಕ್ ಭದ್ರವಾಗಿದ್ದಾರೆ. 2011, 2012, 2014, 2015 ಮತ್ತು 2018ರಲ್ಲಿ ಕೂಡ ಜೊಕೋವಿಕ್ ನಂ.1 ಸ್ಥಾನದಲ್ಲಿ ವರ್ಷ ಮುಗಿಸಿದ್ದರು.

Story first published: Saturday, November 7, 2020, 13:52 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+