Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುಮೋ ಕುಸ್ತಿಪಟು ಜೊತೆ ಕಾದಾಡಿದ ಟೆನಿಸ್ ಸ್ಟಾರ್ ಜೊಕೋವಿಕ್: ವಿಡಿಯೋ

ಸುಮೋ ಕುಸ್ತಿಪಟು ಜೊತೆ ಕಾದಾಡಿದ ಟೆನಿಸ್ ಸ್ಟಾರ್ ಜೊಕೋವಿಕ್ | Oneindia Kannada
Novak Djokovic has a sumo wrestling match in Japan- WATCH

ಟೋಕಿಯೋ, ಸೆಪ್ಟೆಂಬರ್ 30: ಟೆನಿಸ್‌ನಲ್ಲಿ 16 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸರ್ಬಿಯನ್ ಶ್ರೇಷ್ಠ ಆಟಗಾರ ನೊವಾಕ್ ಜೊಕೋವಿಕ್ ಸುಮೋ ಕುಸ್ತಿಪಟು ಜೊತೆ ಕಾದಾಡಿದ್ದಾರೆ. ವಿಶ್ವ ನಂ.1 ಶ್ರೇಯಾಂಕಿತ ಜೊಕೋವಿಕ್, ಸುಮೋ ರಸ್ಲರ್ ಜೊತೆ ಕಾಡಾದಿಡ ವಿಡಿಯೋ ವೈರಲ್ ಆಗಿದೆ.

32ರ ಹರೆಯದ ನೊವಾಕ್ ಜೊಕೋವಿಕ್ ಜಪಾನ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ಗಾಗಿ ಸದ್ಯ ಟೋಕಿಯೋದಲ್ಲಿದ್ದಾರೆ. ಈ ನಡುವೆ ಅಲ್ಲಿನ ಸಾಂಪ್ರದಾಯಿಕ ಸುಮೋ ರಿಂಗ್‌ಗೆ ಭೇಟಿಕೊಟ್ಟಿದ್ದಾರೆ. ಬೆಳಗಿನ ಹೊತ್ತು ಕುಸ್ತಿಪಟುಗಳ ಅಭ್ಯಾಸ ವೀಕ್ಷಿಸಿದ ಜೊಕೋವಿಕ್, ನಿವೃತ್ತ ರಸ್ಲರ್ ಜೊತೆ ತಾನೂ ಒಮ್ಮೆ ರಿಂಗ್‌ಗೆ ಇಳಿದು ತಳ್ಳಾಡಿದ್ದಾರೆ.

'ಸುಮೋ ಕುಸ್ತಿಪಟುಗಳ ಆಕಾರವಿಲ್ಲ ನನಗಿಲ್ಲ ಎಂದು ನನಗನ್ನಿಸುತ್ತದೆ. ಇನ್ನೂ ಸ್ವಲ್ಪ ಕಿಲೋ ಹೆಚ್ಚಾದರೆ, ನಾನು ಸುಮೋ ಕುಸ್ತಿಪಟುಗಳ ಜೊತೆ ಕಾದಾಡಲು ರೆಡಿ. ಈಗಿರುವುದಕ್ಕೆ ಇನ್ನೂ ಮೂರು ಪಟ್ಟು ತೂಕ ಹೆಚ್ಚಿಸಿಕೊಂಡರೆ ಇಲ್ಲಿ ಕಾದಾಡೋಕೆ ಸರಿಯಾಗಲಿದೆ,' ಎಂದು ಜೊಕೋವಿಕ್ ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಶನಲ್ಸ್ (ಎಟಿಪಿ) ವೆಬ್‌ಸೈಟ್ ಜೊತೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಜಪಾನ್ ಓಪನ್ ಟೆನಿಸ್ ಟೂರ್ನಿ ಸೆಪ್ಟೆಂಬರ್ 28ರಿಂದ ಆರಂಭಗೊಂಡಿದ್ದು ಅಕ್ಟೋಬರ್ 6ರ ವರೆಗೆ ನಡೆಯಲಿದೆ. ಅಕ್ಟೋಬರ್ 1ರಂದು ನೊವಾಕ್ ಜೊಕೋವಿಕ್, ಆಸ್ಟ್ರೇಲಿಯಾನ್ ಆಟಗಾರ ಅಲೆಕ್ಸಿ ಪಾಪಿರಿನ್ ವಿರುದ್ಧ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Story first published: Monday, September 30, 2019, 15:46 [IST]
Other articles published on Sep 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+