ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಆಡದ್ದಕ್ಕೆ ವಿಚಿತ್ರ ಕಾರಣಕೊಟ್ಟ ಜೊಕೋವಿಕ್

ಪ್ಯಾರಿಸ್: ನವೆಂಬರ್‌ನಲ್ಲಿ ತಾನು ಯಾವುದೇ ಪಾಯಿಂಟ್ಸ್ ಗೆಲ್ಲುವ ಅವಶ್ಯಕತೆಯಿಲ್ಲದಿರುವುದರಿಂದ ತಾನು ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಹೇಳಿದ್ದಾರೆ. ಸದ್ಯ ವಿಶ್ವ ನಂ.1 ಸ್ಥಾನದಲ್ಲೇ ಉಳಿಯುವ ಯೋಚನೆ ಹಾಕಿಕೊಂಡಿರುವ ಜೊಕೋವಿಕ್ ಈ ನಿರ್ಧಾರ ತಾಳಿದ್ದಾರೆ.
33ರ ಹರೆಯದ ಜೊಕೋವಿಕ್ ಸದ್ಯ 11740 ಪಾಯಿಂಟ್ಸ್‌ಗಳೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನ ಆವರಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ (9850 ಪಾಯಿಂಟ್ಸ್), ತೃತೀಯ ಸ್ಥಾನದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ (9125) ಇದ್ದಾರೆ.
'ನನಗೆ ಅಂಕಪಟ್ಟಿಯಲ್ಲಿ ಅಂಕ ಸೇರಿಸಿಕೊಳ್ಳಲು ಆಗದಿರುವುದರಿಂದ ನಾನು ಪ್ಯಾರಿಸ್ ನಲ್ಲಿ ಆಡುತ್ತಿಲ್ಲ. ಆದರೆ ನಾನು ವಿಯೆನ್ನಾ ಮತ್ತು ಲಂಡನ್‌ಗೆ ಹೋಗಲಿದ್ದೇನೆ,' ಎಂದು ಬೆಲ್ಗೇಡ್ ಡೈಲಿ ಸ್ಪೋರ್ಟ್ಸ್‌ಕಿ ಝರ್ನಲ್‌ನಲ್ಲಿ ಬುಧವಾರ (ಅಕ್ಟೋಬರ್ 21) ಮಾತನಾಡಿದ ಜೊಕೋವಿಕ್ ಹೇಳಿದ್ದಾರೆ.
'ಕಳೆದ ವರ್ಷ ಅಲ್ಲಿ ಆಡಿಲ್ಲವಾದ್ದರಿಂದ ನಾನು ವಿಯೆನ್ನಾದಲ್ಲಿ 500 ಪಾಯಿಂಟ್ಸ್ ಗೆಲ್ಲಬಲ್ಲೆ. ಲಂಡನ್‌ನಲ್ಲೂ ನನಗೆ ಸಾಕಷ್ಟು ಪಾಯಿಂಟ್ಸ್‌ಗಳು ಸಿಗಲಿವೆ,' ಎಂದು ಜೊಕೋವಿಕ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications