Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಲ್ಯಾಂಡ್ ಗ್ಯಾರೋಸ್‌ನಲ್ಲಿ 70ನೇ ಜಯ ದಾಖಲಿಸಿದ ಜೊಕೋವಿಕ್

Novak Djokovic storms to 70th win at Roland Garros

ಪ್ಯಾರಿಸ್: ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಟೆನಿಸ್ ರಂಗದಲ್ಲಿ ಅಪರೂಪದ ಸಾಧನೆ ತೋರಿದ್ದಾರೆ. ರೋಲ್ಯಾಂಡ್ ಗ್ಯಾರೋಸ್‌ ಎಂದು ಕರೆಯಲಾಗುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜೊಕೋವಿಕ್ ಬರೋಬ್ಬರಿ 70 ಗೆಲುವಿನ ದಾಖಲೆ ನಿರ್ಮಿಸಿದ್ದಾರೆ.

ಗುರುವಾರ (ಅಕ್ಟೋಬರ್ 1) ನಡೆದ ಫ್ರೆಂಚ್ ಓಪನ್ ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ ಅವರು ಲಿಥುವೇನಿಯಾದ ರಿಕಾರ್ಡಾಸ್ ಬೆರಾಂಕಿಸ್ ಅವರನ್ನು 6-1, 6-2, 6-2 ಅಂತರದಿಂದ ಸೋಲಿಸಿದರು. ಇದರೊಂದಿಗೆ ಜೊಕೋವಿಕ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ರಿಕಾರ್ಡಾಸ್ ಮತ್ತು ಜೊಕೋವಿಕ್ ಮಧ್ಯೆ ಸುಮಾರು 83 ನಿಮಿಷಗಳ ಕಾದಾಟ ನಡೆಯಿತು. 17 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೋವಿಕ್ ರಿಕಾರ್ಡಾಸ್ ಎದುರಿನ ಜಯದೊಂದಿಗೆ ರೋಲ್ಯಾಂಡ್ ಗ್ಯಾರೋಸ್ 70 ಜಯದ ಸಾಧನೆ ತೋರಿದ್ದಾರೆ.

ಫ್ರೆಂಚ್ ಓಪನ್‌ನಲ್ಲಿ ಹೆಚ್ಚು ಗೆದ್ದ ದಾಖಲೆ 12 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದಿರುವ ರಫೇಲ್ ನಡಾಲ್ ಹೆಸರಿನಲ್ಲಿದೆ. ನಡಾಲ್ 95 ಪಂದ್ಯಗಳನ್ನು ಗೆದ್ದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜೊಕೋವಿಕ್ ಮತ್ತು ಮತ್ತೊಬ್ಬ ಅನುಭವಿ ಆಟಗಾರ ರೋಜರ್ ಫೆಡರರ್ ಇದ್ದಾರೆ.

Story first published: Thursday, October 1, 2020, 23:59 [IST]
Other articles published on Oct 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+