Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್‌ಗೆ ಕೊರೊನಾ ಸೋಂಕು

Novak Djokovic tests positive for coronavirus

ಬೆಲ್ಗ್ರೇಡ್, ಜೂನ್ 23: ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್‌ಗೆ ಮಾರಕ ಕೊರೊನಾವೈರಸ್ ಸೋಂಕು ತಗುಲಿದೆ. ಸರ್ಬಿಯನ್ ಆಟಗಾರ ಜೊಕೋವಿಕ್ ಈ ವಿಚಾರವನ್ನು ಹೇಳಿಕೆಯ ಮೂಲಕ ಮಂಗಳವಾರ (ಜೂನ್ 23) ತಿಳಿಸಿದ್ದಾರೆ.

ಕ್ರೊಯೇಷಿಯಾದ ಬೊರ್ನಾ ಕೋರಿಕ್, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಮತ್ತು ವಿಕ್ಟರ್ ಟ್ರಾಯ್ಕಿ ಅವರಿಗೂ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಬಾಲ್ಕನ್ ರೀಜನ್‌ನಲ್ಲಿ ನಡೆದ ಜೋಕೊವಿಕ್ ಅವರ ಆ್ಯಂಡ್ರಿಯಾ ಟೂರ್ ಪ್ರದರ್ಶನ ಪಂದ್ಯಾವಳಿಯಲ್ಲಿ ಆಡಿದ ಬಳಿಕ ಮೂವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.

'ಬಲ್ಗ್ರೇಡ್‌ಗೆ ಬಂದಿಳಿದ ತಕ್ಷಣವೇ ನಾವು ಕೊರೊನಾ ವೈರಸ್ ಪರೀಕ್ಷೆಗೆ ಒಳಗಾದೆವು. ಜೆಲೆನಾಳ (ಪತ್ನಿ) ಫಲಿತಾಂಶ ಪಾಸಿಟಿವ್ ಬಂದಂತೆ ನನ್ನ ಫಲಿತಾಂಶವೂ ಪಾಸಿಟಿವ್ ಬಂದಿದೆ. ನಮ್ಮ ಮಕ್ಕಳ ಫಲಿತಾಂಶ ನೆಗೆಟಿವ್ ಬಂದಿದೆ,' ಎಂದಿರುವ 33ರ ಹರೆಯದ ಜೊಕೋವಿಕ್ ತನಗೆ ಸೋಂಕಿನ ಲಕ್ಷಣಗಳಾವುವೂ ಇರಲಿಲ್ಲ ಎಂದೂ ತಿಳಿಸಿದ್ದಾರೆ.

29 ವರ್ಷದ ವಿಶ್ವದ 19ನೇ ಕ್ರಮಾಂಕದ ಡಿಮಿಟ್ರೋವ್, ಇನ್ಸ್ಟಾಗ್ರಾಮ್‌ನಲ್ಲಿ ಭಾನುವಾರ ಈ ಸುದ್ದಿಯನ್ನು ತಿಳಿಸಿದ್ದರು. ಜೊಕೊವಿಕ್ ಮತ್ತು ರಷ್ಯಾದ ಆಂಡ್ರೆ ರುಬ್ಲೆವ್ ಫೈನಲ್ ಪಂದ್ಯವನ್ನು ಕ್ರೊಯೇಷಿಯಾದ ಖಾದರ್ ನಗರದಲ್ಲಿ ಆಡಬೇಕಿತ್ತು.

Story first published: Wednesday, June 24, 2020, 9:41 [IST]
Other articles published on Jun 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+