ನೊವಾಕ್ ಜೊಕೋವಿಕ್‌ಗೆ 9ನೇ ಆಸ್ಟ್ರೇಲಿಯನ್ ಓಪನ್ ಕಿರೀಟ!

ಮೆಲ್ಬರ್ನ್: ಸರ್ಬಿಯಾದ ಬಲಿಷ್ಠ ಆಟಗಾರ ನೊವಾಕ್ ಜೊಕೋವಿಕ್ ದಾಖಲೆಯ 9ನೇ ಅಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ (ಫೆಬ್ರವರಿ 20) ನಡೆದ 2021ರ ಆಸ್ಟ್ರೇಲಿಯನ್ ಓಪನ್ ಪುರುಷರ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ಅವರು ಡೇನಿಲ್ ಮೆಡ್ವೆಡೆವ್ ಸೋಲಿಸಿದ್ದಾರೆ.
ಭಾನುವಾರ ಮೆಲ್ಬರ್ನ್‌ನ ರೋಡ್ ಲ್ಯಾವರ್ಸ್ ಅರೆನಾದಲ್ಲಿ ನಡೆದ ಪುರುಷ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್ ಅವರು ರಷ್ಯಾದ ಡೇನಿಲ್ ಮೆಡ್ವೆಡೆವ್ ವಿರುದ್ಧ 7-5, 6-2, 6-2ರ ಗೆಲುವು ದಾಖಲಿಸಿದರು.
ಆಸ್ಟ್ರೇಲಿಯಾ ಓಪನ್ 9ನೇ ಪ್ರಶಸ್ತಿ ಗೆಲ್ಲುವ ಮೂಲಕ ಜೊಕೋವಿಕ್ ಒಟ್ಟಿಗೆ 18ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಗ್ರ್ಯಾಂಡ್‌ಸ್ಲ್ಯಾಮ್ ಜಯದ ಸಾರ್ವಕಾಲಿಕ ದಾಖಲೆಯೆಂದರೆ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳು.
ಮೆಡ್ವೆಡೆವ್ ಮತ್ತು ಜೊಕೋವಿಕ್ ನಡುವಿನ ಕಾಳಗದಲ್ಲಿ ಮೆಡ್ವೆಡೆವ್ ಅಂಥ ಪ್ರತಿರೋಧ ನೀಡಿದ್ದೇ ಕಾಣಲಿಲ್ಲ. ಆರಂಭಿಕ ಸೆಟ್‌ನಲ್ಲಿ ಮಾತ್ರ ಕೊಂಚ ಪೈಪೋಟಿ ನೀಡಿದ್ದು ಬಿಟ್ಟರೆ ಉಳಿದಂತೆ ಜೊಕೋವಿಕ್ ಪಾರಮ್ಯ ಸಾಧಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications