ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್ ಸ್ಟಾರ್ ನೊವಾಕ್ ಜೊಕೋವಿಕ್, ಪತ್ನಿ ಜೆಲೆನಾಗೆ ಕೊರೊನಾ ನೆಗೆಟಿವ್

Novak Djokovic, wife Jelena test negative for covid-19

ಬೆಲ್ಗ್ರೇಡ್, ಜುಲೈ 3: ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಮತ್ತವರ ಪತ್ನಿ ಜೆಲೆನಾಗೆ ಕೊರೊನಾ ವೈರಸ್ ನೆಗೆಟಿವ್ ಬಂದಿದೆ. ಇಬ್ಬರಿಗೂ 9 ದಿನಗಳ ಹಿಂದೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿತ್ತು. ಈಗ ಜೊಕೋವಿಕ್ ಮತ್ತು ಜೆಲೆನಾ ಇಬ್ಬರೂ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಜೊಕೋವಿಕ್ ಮಾಧ್ಯಮ ತಂಡ ತಿಳಿಸಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ವಿಂಡೀಸ್ ತಂಡ ಪ್ರಕಟ, ಗೇಬ್ರಿಯಲ್ ಸೇರ್ಪಡೆಇಂಗ್ಲೆಂಡ್ vs ವೆಸ್ಟ್ ಇಂಡೀಸ್: ವಿಂಡೀಸ್ ತಂಡ ಪ್ರಕಟ, ಗೇಬ್ರಿಯಲ್ ಸೇರ್ಪಡೆ

ಸರ್ಬಿಯಾದಲ್ಲಿ ಕೊರೊನಾ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಜೊಕೋವಿಕ್ ಅವರು ಬೆಲ್ಗ್ರೇಡ್‌ನಲ್ಲಿ 'ಆ್ಯಂಡ್ರಿಯಾ' ಎನ್ನುವ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಜೊಕೋವಿಕ್‌, ಪತ್ನಿ ಜೆಲೆನಾ, ಸ್ಟಾರ್ ಆಟಗಾರರಾದ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯಾ), ಬೊರ್ನಾ ಕೋರಿಕ್ (ಕ್ರೊಯೇಶಷಿಯಾ) ಮತ್ತು ವಿಕ್ಟರ್ ಟ್ರಾಯ್ಕಿ(ಸರ್ಬಿಯಾ)ಗೂ ಕೊರೊನಾ ತಗುಲಿತ್ತು.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!

'ಬೆಲ್ಗ್ರೇಡ್‌ನಲ್ಲಿ ಕೊರೊನಾ ಸೋಂಕಿಗೀಡಾಗಿದ್ದ ನೊವಾಕ್ ಜೊಕೋವಿಕ್ ಮತ್ತು ಅವರ ಪತ್ನಿ ಜೆಲೆನಾ ಅವರ ಕೋವಿಡ್-19 ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ. ಇಬ್ಬರಿಗೂ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಡಾಕ್ಟರ್ ಸಮಾಲೋಚನೆಗಳನ್ನು ಪಾಲಿಸಿದ ಬಳಿಕ ಇಬ್ಬರೂ ಮತ್ತೆ ಪರೀಕ್ಷೆಗೆ ಒಳಗಾಗಿದ್ದರು,' ಎಂದು ಹೇಳಿಕೆ ಮೂಲಕ ಜೊಕೋವಿಕ್ ಮಾಧ್ಯಮ ತಂಡ ತಿಳಿಸಿದೆ.

ಭಾರತ-ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ವಿಂಡೀಸ್ ದಿಗ್ಗಜ ಎವರ್ಟನ್ ವೀಕ್ಸ್ ನಿಧನಭಾರತ-ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ವಿಂಡೀಸ್ ದಿಗ್ಗಜ ಎವರ್ಟನ್ ವೀಕ್ಸ್ ನಿಧನ

ಕೊರೊನಾ ಭೀತಿಯ ಈ ದಿನಗಳಲ್ಲಿ ಚಾರಿಟಿ ಟೂರ್ನಿ ಆಯೋಜಿಸಿದ್ದಕ್ಕಾಗಿ ಜೊಕೋವಿಕ್ ಕೆಲವರ ಟೀಕೆಗೆ ಗುರಿಯಾಗಿದ್ದರು. ಆದರೆ ಸರ್ಬಿಯಾ ಪ್ರಧಾನಿ ಅನಾ ಬ್ರನಾಬಿಕ್ ಮಾತ್ರ ಒಳ್ಳೆಯ ಉದ್ದೇಶಕ್ಕಾಗಿ ಟೂರ್ನಿ ಆಯೋಜಿಸಿದ್ದ ಜೊಕೋವಿಕ್ ಅವರನ್ನು ಸಮರ್ಥಿಸಿಕೊಂಡಿದ್ದರು. ಅಂದ್ಹಾಗೆ ಕೊರೊನಾ ತೀವ್ರಗೊಂಡಿರುವ ಸರ್ಬಿಯಾ ಭಾಗಕ್ಕೆ ಜೊಕೋವಿಕ್ ಸುಮಾರು 33,79,415 ರೂ. ದೇಣಿಗೆ ಕೂಡ ನೀಡಿದ್ದರು.

Story first published: Friday, July 3, 2020, 14:07 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X