Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೇಕ್ಷಕರಿಗೆ ಅನುಮತಿ ಕೊಟ್ಟರೆ ಮಾತ್ರ ಒಲಿಂಪಿಕ್ಸ್‌ನಲ್ಲಿ ಆಡ್ತೇನೆ: ಜೊಕೋವಿಕ್

Novak Djokovic will play Olympics only if fans allowed

ಬೆಲ್ಗ್ರೇಡ್: ವಿಶ್ವ ನಂ.1 ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಒಲಿಂಪಿಕ್ಸ್‌ನಲ್ಲಿ ತಾನು ಆಡುವ ನಿರ್ಧಾರವನ್ನು ಮರುಪರಿಗಣಿಸಲಿರುವುದಾಗಿ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡದಿದ್ದರೆ ತಾನು ಗೇಮ್ಸ್‌ನಲ್ಲಿ ಆಡೋದು ಅನುಮಾನ ಎಂಬರ್ಥದಲ್ಲಿ ಜೊಕೋವಿಕ್ ಹೇಳಿಕೆ ನೀಡಿದ್ದಾರೆ.

ಕೋವಿಡ್-19 ಭೀತಿಯ ಕಾರಣ ಒಲಿಂಪಿಕ್ಸ್ ಆಯೋಜನೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ. ಕೆಲವರು ಗೇಮ್ಸ್‌ ಅನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಬೇಕು ಎನ್ನುತ್ತಿದ್ದರೆ, ಜಪಾನ್‌ನ ಕೆಲ ಡಾಕ್ಟರ್ ಅಸೋಸಿಯೇಶನ್‌ಗಳು ಗೇಮ್ಸ್ ನಡೆಸದಿದ್ದರೆ ಚೆನ್ನ ಎನ್ನುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಕೋವಿಕ್, 'ಪ್ರೇಕ್ಷರನ್ನು ಸ್ಟೇಡಿಯಂ ಒಳಗೆ ಪ್ರವೇಶ ನೀಡುವಲ್ಲಿವರೆಗೆ ನಾನು ಒಲಿಂಪಿಕ್ಸ್‌ನಲ್ಲಿ ಆಡಲು ಯೋಜನೆ ಹಾಕಿಕೊಂಡಿದ್ದೇನೆ. ಒಂದು ವೇಳೆ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಅನುಮತಿ ನೀಡದಿದ್ದರೆ ನಾನು ಆಡುವ ಬಗ್ಗೆ ಇನ್ನೊಮ್ಮೆ ಯೋಚಿಸುತ್ತೇನೆ,' ಎಂದಿದ್ದಾರೆ.

2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್ ಕಾರಣ 2021ಕ್ಕೆ ಮುಂದೂಡಲ್ಪಟ್ಟಿತ್ತು. ಗೇಮ್ಸ್‌ನಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಜೊಕೋವಿಕ್ ಒಬ್ಬರೇ ಅಲ್ಲ, ಸ್ಟಾರ್ ಆಟಗಾರರಾದ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಅಮೆರಿಕಾದ ಸೆರೆನಾ ವಿಲಿಯಮ್ಸ್ ಕೂಡ ಆಡುವ ಬಗ್ಗೆ ಭರವಸೆಯಿಲ್ಲ ಎಂದು ಹೇಳಿದ್ದರು.

Story first published: Friday, May 28, 2021, 0:17 [IST]
Other articles published on May 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+